ಉಡುಪಿ : ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಯದ ವಾತಾವರಣ ಸೃಷ್ಟಿಸಿ ಸಾರ್ವಜನಿಕರಲ್ಲಿ ಕಳ್ಳನೆಂಬ ಸಂಶಯ ಮೂಡಿಸಿದ್ದ ಮಾನಸಿಕ ಅಸ್ವಸ್ಥನನ್ನು ವಿಶು ಶೆಟ್ಟಿ (ಅಂಬಲಪಾಡಿ) ಅವರು ಪೊಲೀಸರ ಸಹಕಾರದಿಂದ ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ ಘಟನೆ ಇದೀಗ ಮಾನವೀಯ ಅಂತ್ಯ ಕಂಡಿದೆ.

ತಮಿಳುನಾಡು ಮೂಲದ ಜಗನ್ ಬಾಬು (30) ಎಂಬಾತ, ಕಳೆದ ಕೆಲವು ದಿನಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಾ ಗಲಭೆ ಹಾಗೂ ಆತಂಕ ಸೃಷ್ಟಿಸುತ್ತಿದ್ದನು. ಈ ಕುರಿತು ಮಾಹಿತಿ ಪಡೆದ ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಿಶು ಶೆಟ್ಟಿಯವರ ಸಹಾಯದೊಂದಿಗೆ ಆತನನ್ನು ಸ್ನೇಹಾಲಯಕ್ಕೆ ದಾಖಲಿಸಿದರು.

ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಸ್ನೇಹಾಲಯದ ಸಿಬ್ಬಂದಿ ಆತನ ಸಹೋದರರೊಂದಿಗೆ ಸಂಪರ್ಕ ಸಾಧಿಸಿ, ಸಂಬಂಧಿಕರಿಗೆ ಮಾಹಿತಿ ನೀಡಿದರು. ನಂತರ, ಸಹೋದರರು ಹಾಗೂ ಕುಟುಂಬ ಸದಸ್ಯರು ಮಂಜೇಶ್ವರದ ಸ್ನೇಹಾಲಯಕ್ಕೆ ಆಗಮಿಸಿ ಜಗನ್ ಬಾಬುವನ್ನು ತಮ್ಮೊಂದಿಗೆ ಊರಿಗೆ ಕರೆದುಕೊಂಡು ಹೋಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಸ್ನೇಹಾಲಯದ ಮುಖ್ಯಸ್ಥರಿಗೆ ಮೂಲ್ಕಿ ಪೊಲೀಸರು ಧನ್ಯವಾದ ತಿಳಿಸಿದ್ದಾರೆ.



