Thursday, October 23, 2025

spot_img

” ಕಲರವ ” ಮಕ್ಕಳ ಕಲಾಶಿಬಿರ

ಉಡುಪಿ : ಕಲ್ಯಾಣಿ ಕಲಾಕೇಂದ್ರ (ರಿ)ಸುಬ್ರಹ್ಮಣ್ಯನಗರ, ಉಡುಪಿ ಮತ್ತು ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನ (ಶ್ರೀ ಸೋದೆ ವಾದಿರಾಜ ಮಠ, ಉಡುಪಿ ) ಇದರ ಸಂಯುಕ್ತ ಆಶ್ರಯದಲ್ಲಿ “ಕಲರವ” ಮಕ್ಕಳ ಕಲಾ ಶಿಬಿರ ದೇವಸ್ಥಾದ ಸಭಾಂಗಣದಲ್ಲಿ ನಡೆಯಿತು. ನಾರಾಯಣ ಹೆಬ್ಬಾರ್ ರವರು ದೀಪ ಬೆಳಗಿ ಶಿಬಿರವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಸುದರ್ಶನ್ ಆಚಾರ್ಯ ರಿಂದ ಮಿಮಿಕ್ರಿ, ವಸಂತ ಪಾಲನ್ ರಿಂದ ಓರಿಗಾಮಿ, ದಾಮೋದರ್ ಆಚಾರ್ಯ ರಿಂದ ಕ್ರಾಫ್ಟ್, ಶ್ರೀಮತಿ ಸುನೀತಾ ಮತ್ತು ತಂಡದವರಿಂದ ಯೋಗ, ದಿವಾಕರ್ ಕಟೀಲು ಇವರಿಂದ ರಂಗಚಟುವಟಿಕೆ, ರಂಗಗೀತೆ, ವೆಂಕಟಕೃಷ್ಣ ಭಟ್ ರಿಂದ ರಸಪ್ರಶ್ನೆ, ನಿರಂಜನ್ ಭಟ್ ರಿಂದ ಮಕ್ಕಳ ಚರ್ಚೆ ಮತ್ತು ಡಾ. ಶ್ರೀಧರ ಬಾಯರಿ ಇವರಿಂದ ಆರೋಗ್ಯ ಮಾಹಿತಿಗಳನ್ನು ನೀಡಲಾಯಿತು.

ಸಮಾರೋಪ ಸಮಾರಂಭದ ಅತಿಥಿಗಳಾದ ವಿದ್ವಾನ್ ಗೋಪಾಲಕೃಷ್ಣ ಉಪಾಧ್ಯರವರು ಶಿಬಿರದಲ್ಲಿ ಕಲಿತ ವಿದ್ಯೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿ ಮಕ್ಕಳಿಗೆ ಶುಭ ಹಾರೈಸಿದರು. ಅತಿಥಿಗಳಾದ ಶ್ರೀಮತಿ ಹೆಚ್ ತಾರಾದೇವಿ ಇವರು ಮಕ್ಕಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ರಜಾಕಾಲದ ಶಿಬಿರಗಳ ಉದ್ದೇಶಗಳ ಬಗ್ಗೆ ಮಾತಾಡಿ ಮಕ್ಕಳ ಚಟುವಟಿಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ರಂಗ ಕಲಾವಿದ ದಿವಾಕರ ಕಟೀಲು ಇವರು ಮಾತನಾಡಿ ಇಂತಹ ಶಿಬಿರಗಳು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲು ಸೂಕ್ತ ವೇದಿಕೆಯಾಗಿದ್ದು ಆಯೋಜನೆಗೆ ಅಭಿನಂದನೆ ಸಲ್ಲಿಸಿದರು. ಕಲಾಕೇಂದ್ರದ ಅಧ್ಯಕ್ಷ ನಿರಂಜನ್ ಭಟ್, ಉಪಾಧ್ಯಕ್ಪ ಶ್ರೀ ವೆಂಕಟಕೃಷ್ಣ ಭಟ್ ಮತ್ತು ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾಕೇಂದ್ರದ ಕೋಶಾಧಿಕಾರಿ ಕುಮಾರಿ ಆದ್ಯತಾ ಭಟ್ ಶಿಬಿರವನ್ನು ಸಂಯೋಜಿಸಿ, ಶಿಬಿರಗೀತೆ, ಗೀಗೀ ಹಾಡು, ಕಲಿಕಾ ಚಟುವಟಿಕೆ ಮತ್ತು ಮನರಂಜನಾ ಆಟಗಳನ್ನು ಆಡಿಸಿದರು.

ಶ್ರೀಮತಿ ಶ್ರೀವಿದ್ಯಾ ಕೇದ್ಲಾಯ ಸ್ವಾಗತಿಸಿ ವಸಂತ ಪಾಲನ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷೀಯ ಭಾಷಣದೊಂದಿಗೆ ಶಿಬಿರ ನಡೆಸಲು ಸ್ಥಳಾವಕಾಶ, ಊಟೋಪಹಾರ ನೀಡಿ ಸಹಕರಿಸಿದ ಗೋಪಾಲಕೃಷ್ಣ ಉಪಾಧ್ಯ ಮತ್ತು ಶ್ರೀಕಾಂತ ಉಪಾಧ್ಯ ಮತ್ತು ಶಿಬಿರದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles