ಉಡುಪಿ : ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರ ಕರಾವಳಿ ಬೈಪಾಸ್ ಬಳಿ ಇರುವ ಹೋಟೆಲ್ ಪಕ್ಕದ ಖಾಲಿ ಜಾಗದಲ್ಲಿ ಆಕಸ್ಮಿಕ ವಾಗಿ ಬೆಂಕಿ ಕಾಣಿಸಿಕೊಂಡು ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಯಿತು.

ರಾತ್ರಿ 7-30 ರ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ ಗೆ ತಾಗಿ ಕೊಂಡಿರುವ ಖಾಸಗಿ ಜಾಗದಲ್ಲಿ ಬೆಳೆದು ನಿಂತಿದ್ದ ಹುಲ್ಲು ಮತ್ತು ಒಣ ಕಸಕ್ಕೆ ಆಕಸ್ಮಿಕ ವಾಗಿ ಬೆಂಕಿ ಹೊತ್ತಿಕೊಂಡಿದೆ.

ತಕ್ಷಣವೇ ಸ್ಥಳೀಯರು ಮತ್ತು ಉಡುಪಿ ಅಗ್ನಿ ಶಾಮಕ ದಳದ ವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸದರು. ನೀರಿನ ಕೊರತೆಯಿಂದಾಗಿ ಖಾಸಗಿ ಟ್ಯಾಂಕರ್ ಗಳಿಂದಲೂ ನೀರು ಹಾಯಿಸಿಲಾಗಿತ್ತು.

ಬೆಂಕಿ ಬಿದ್ದ ಸ್ಥಳದ ಹತ್ತಿರವೇ ಗುಜರಿ ಅಂಗಡಿ ಮತ್ತು ಖಾಸಗಿ ಹೊಟೆಲ್ ಇದ್ದು, ಇಲ್ಲಿಗೆ ಬೆಂಕಿ ವ್ಯಾಪಿಸಿದ್ದಲ್ಲಿ ಅಪಾರ ನಷ್ಟ ಉಂಟಾಗುವ ಸಂಭವವಿತ್ತು.
