ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಇಂದು ಬೆಂಗಳೂರಿನಲ್ಲಿ ನಗರ ಮತ್ತು ಗ್ರಾಮಾಂತರ ಆಯುಕ್ತ ಕಛೇರಿಯಲ್ಲಿ ನಿರ್ದೇಶಕ ತಿಪ್ಪೇಸ್ವಾಮಿ ಇವರನ್ನು ಭೇಟಿಯಾಗಿ, ಭೇಟಿ ಮಾಡಿ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿನ ಏಕ ವಿನ್ಯಾಸ ನಕ್ಷೆ (9/11) ವಿಳಂಬ ಹಾಗೂ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.

ಈ ವೇಳೆ ಈ ಸಮಸ್ಯೆ ಪರಿಹರಿಸಿಸುವ ಬಗ್ಗೆ ದಾರಿಯ ನಿರ್ದಿಷ್ಟ 6 ಮೀಟರ್ ಇರಬೇಕೆನ್ನುವ ಬಗ್ಗೆ ಹಾಗೂ ಇಲಾಖೆಯಲ್ಲಿನ ಆದೇಶಗಳನ್ನ ಪಾಲಿಸುವ ಬಗ್ಗೆ ಸಮಸ್ಯೆ ಇರುವುದರಿಂದ ಜನರಿಗೆ ಯಾವುದೇ ಮಂಜೂರಾತಿ ನೀಡದಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದ ಅವರು ತ್ವರಿತವಾಗಿ ದಾರಿಗಳ ಬಗ್ಗೆ ನಿರ್ದಿಷ್ಟ ಆದೇಶವನ್ನು ಹಾಗೂ ಉಡುಪಿ ಹಾಗೂ ಕುಂದಾಪುರ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ಸ್ಪಷ್ಟ ಆದೇಶಗಳನ್ನ ನೀಡುವಂತೆ ತಿಳಿಸಿದರು. ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿನ ಏಕ ವಿನ್ಯಾಸ ನಕ್ಷೆ (9/11) ವಿಳಂಬ ಹಾಗೂ ಸಮಸ್ಯೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಶಾಸಕರ ಪ್ರಯತ್ನ ಮುಂದುವರಿದಿದ್ದು, ಶೀಫ್ರದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.