ಉಡುಪಿ : ಯಕ್ಷಗಾನ ಕಲಾರಂಗದಲ್ಲಿ ಇಪ್ಪತ್ತೇಳು ವರ್ಷ ಕೋಶಾಧಿಕಾರಿಗಳಾಗಿ ಸೇವೆಸಲ್ಲಿಸಿದ್ದ ಎಸ್. ಗೋಪಾಲಕೃಷ್ಣ ಇವರ ನೆನಪಿನಲ್ಲಿ ಸಂಸ್ಥೆಯು ಸೇವಾಭೂಷಣ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಈ ಬಾರಿಯ ಪ್ರಶಸ್ತಿ ಸಮಾರಂಭವು ಫೆಬ್ರವರಿ 28, 2025, ಶುಕ್ರವಾರ ಸಂಜೆ 5.00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಲಿರುವುದು. ಬಳಕೆದಾರರ ವೇದಿಕೆಯ ಸಂಚಾಲಕರಾಗಿ ಎರಡೂವರೆ ದಶಕಗಳ ಕಾಲ ಸೇವೆಸಲ್ಲಿಸಿದ, ಹಿರಿಯ ಮೌನ ಸಾಮಾಜಿಕ ಸಾಧಕ, ಕಾರ್ಪೊರೇಶನ್ ಬ್ಯಾಂಕ್ನ ನಿವೃತ್ತ ಮಹಾಪ್ರಬಂಧಕರಾದ ಎ. ಪದ್ಮನಾಭ ಕೊಡಂಚ ಇವರಿಗೆ ಮೂಡಬಿದ್ರೆಯ ಆಳ್ವಾಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಎಂ. ಮೋಹನ್ ಆಳ್ವರು ಪ್ರಶಸ್ತಿ ಪ್ರದಾನ ಮಾಡಲಿರುವರು. ಬಳಕೆದಾರರ ವೇದಿಕೆಯ ವಿಶ್ವಸ್ಥರಾದ ಎನ್. ರಾಮ ಭಟ್ ಅವರು ಅಭಿನಂದನಾ ಮಾತುಗಳನ್ನು ಆಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.