Monday, March 2, 2026

spot_img

ಉಡುಪಿಯಲ್ಲಿ ಪಾಕಿಸ್ತಾನ ಪರ ಗೂಢಚರ್ಯೆ ಜಾಲ ಬಯಲು: ಇಬ್ಬರು ಶಿಪ್ ಯಾರ್ಡ್ ಕಾರ್ಮಿಕರು ಬಂಧನ

ಉಡುಪಿ : ಉಡುಪಿ ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಪಾಕಿಸ್ತಾನ ಪರ ಗೂಢಚರ್ಯೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂದು ಗುರುತಿಸಲಾಗಿದೆ. ಬಂಧಿತರಿಬ್ಬರೂ ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್ ಮುಖಾಂತರ ಗುತ್ತಿಗೆ ಆಧಾರದಲ್ಲಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ನೇಮಕವಾಗಿದ್ದರು. ಭಾರತೀಯ ನೌಕಾಪಡೆಯಿಗೆ ಟಗ್‌ಗಳು ಸೇರಿದಂತೆ ವಿವಿಧ ನೌಕೆಗಳನ್ನು ನಿರ್ಮಿಸುವ ಈ ಸಂಸ್ಥೆ ಖಾಸಗಿ ವಲಯಕ್ಕೂ ಹಡಗು ನಿರ್ಮಾಣ ಮಾಡುತ್ತದೆ. ಕೇರಳದಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್‌ನ ಮುಖ್ಯ ಕಚೇರಿಯಿಂದ ಪಡೆದ ದೂರು ಆಧರಿಸಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಒಂದೂವರೆ ವರ್ಷಗಳಿಂದ ಗೌಪ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ?

ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರೂ ಒಂದೂವರೆ ವರ್ಷಗಳಿಂದ ಭಾರತ ನೌಕಾಪಡೆಯ ಹಡಗುಗಳ ಗೌಪ್ಯ ಪಟ್ಟಿ, ತಾಂತ್ರಿಕ ವಿವರಗಳು ಹಾಗೂ ನೌಕೆ ನಿರ್ಮಾಣ ಸಂಬಂಧಿತ ಸಂವೇದನಾಶೀಲ ಮಾಹಿತಿಯನ್ನು ವಾಟ್ಸಪ್ ಮೂಲಕ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರೆಂಬ ಗಂಭೀರ ಆರೋಪ ಎದುರಿಸಿದ್ದಾರೆ.  ಕೇರಳದಲ್ಲಿ ಕೆಲಸ ಮಾಡುತ್ತಿದ್ದಾಗಲೇ ರೋಹಿತ್ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದನು, ಅದಕ್ಕಾಗಿ ಹಣ ಪಡೆಯುತ್ತಿದ್ದನೆಂಬ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ. ನಂತರ ಉಡುಪಿಯ ಮಲ್ಪೆ ಶಿಪ್ ಯಾರ್ಡ್‌ಗೆ ಬಂದು ಕೂಡ ಇದೇ ಚಟುವಟಿಕೆಯನ್ನು ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ನೀಡಿದ ಶಿಪ್ ಯಾರ್ಡ್ ಸಿಇಒ

ಕೊಚ್ಚಿನ್ ಶಿಪ್ ಯಾರ್ಡ್‌ ಸಿಇಒ ನೀಡಿದ ದೂರು ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪ್ರಕರಣವು ರಾಷ್ಟ್ರದ ಭದ್ರತೆ, ಸಾರ್ವಭೌಮತೆ ಮತ್ತು ರಕ್ಷಣಾ ರಹಸ್ಯಗಳಿಗೆ ಧಕ್ಕೆ ತರುವ ಗಂಭೀರ ಅಪರಾಧ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಷನಲ್ ಏಜೆನ್ಸಿಗಳ ತನಿಖೆ ಸಾಧ್ಯತೆ

ಘಟನೆಯ ಗಂಭೀರತೆಯನ್ನು ಗಮನಿಸಿ, ಮುಂದಿನ ಹಂತದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಈ ಪ್ರಕರಣ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles