ಉಡುಪಿ : ಹಿರಿಯ ನಟ ಹರೀಶ್ ರಾಯ್ ಅವರ ಅಂತ್ಯಕ್ರಿಯೆ ಇಂದು ಉಡುಪಿಯಲ್ಲಿ ವಿಧಿವಿಧಾನಗಳೊಂದಿಗೆ ನೆರವೇರಿತು.
ಅವರ ಅಂಬಲಪಾಡಿಯಲ್ಲಿರುವ ಮನೆಯಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ, ತುಳಸಿ ಕಟ್ಟೆ ಮುಂಭಾಗದಲ್ಲಿ ಅರ್ಚಕರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಿಸಲಾಯಿತು.

ಅಂತಿಮ ವಿಧಿ ವಿಧಾನದಲ್ಲಿ ಹರೀಶ್ ಆಚಾರ್ಯ, ಆಪ್ತ ಬಂಧುಗಳು ಹಾಗೂ ಕುಟುಂಬ ಸದಸ್ಯರು ಭಾಗವಹಿಸಿ ಮೃತನಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಉಡುಪಿಯ ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ದಿವಂಗತ ನಟನ ದೇಹಕ್ಕೆ ಅಗ್ನಿಸ್ಪರ್ಶ ನಡೆಯಿತು.

ಅಗ್ನಿಸ್ಪರ್ಶ ವಿಧಿ ಸಹೋದರ ಸತೀಶ್ ರಾಯ್ ಹಾಗೂ ಪುತ್ರರಾದ ರೋನೆತ್ ರಾಯ್ ಮತ್ತು ರೋಷನ್ ರಾಯ್ ಅವರಿಂದ ನೆರವೇರಿಸಲಾಯಿತು.

ಅಂತಿಮ ನಮನ ವೇಳೆ ಪತ್ನಿ, ಸಹೋದರ-ಸಹೋದರಿಯರು ಹಾಗೂ ಬಂಧುಗಳು ಭಾಗಿಯಾದರು. ಉಡುಪಿಯ ಚಲನಚಿತ್ರ ಕಲಾವಿದರು ಹಾಗೂ ಅಭಿಮಾನಿಗಳು ಸ್ಥಳಕ್ಕೆ ಆಗಮಿಸಿ ತಮ್ಮ ಪ್ರೀತಿಯ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದರು.



