Thursday, October 23, 2025

spot_img

ಉಚ್ಚಿಲ ದಸರಾ ಮಹೋತ್ಸವ: ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಸೆಪ್ಟೆಂಬರ್ 27 ರಂದು ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ

ಉಡುಪಿ: ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಹೆಣ್ಣು ಮಕ್ಕಳಿಗೆ ಪೊಣ್ಣು ಪಿಲಿ ನಲಿಕೆ 2025 ಕಾರ್ಯಕ್ರಮ ಅಯೋಜಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಸೆಪ್ಟೆಂಬರ್ 27 ಶನಿವಾರ ಬೆಳಿಗ್ಗೆ 9.30ಕ್ಕೆ ಉಚ್ಚಿಲ ಮೊಗವೀರ ಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ.

ಚಿತ್ರ ಬಿಡಿಸುವ ಸ್ಪರ್ಧೆಯ ಚಿತ್ರ ರಚನೆಯ ವಿಷಯವಾಗಿ ನಾಡ ಹಬ್ಬ ದಸರಾವನ್ನು ಆಯ್ಕೆ ಮಾಡಿದ್ದು, ಸ್ಪರ್ಧಿಗಳು ಈ ವಿಷಯಕ್ಕೆ ಸಂಬಂಧಿಸಿದ ಚಿತ್ರವನ್ನು ಬಿಡಿಸಬೇಕು. ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಿದ್ದು ಕಿರಿಯರ ವಿಭಾಗ (1 ರಿಂದ 4ನೇ ತರಗತಿ), ಪ್ರಾಥಮಿಕ ವಿಭಾಗ ( 5 ರಿಂದ 7 ನೇ ತರಗತಿ), ಹೈಸ್ಕೂಲ್ ವಿಭಾಗ (8 ರಿಂದ 10ನೇ ತರಗತಿ), ಕಾಲೇಜು ವಿಭಾಗ (ಪದವಿ ಪೂರ್ವ ಮತ್ತು ಪದವಿ ತರಗತಿ) ಹಾಗೂ ಸಾರ್ವಜನಿಕ ವಿಭಾಗದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧಾಳುಗಳಿಗೆ ಡ್ರಾಯಿಂಗ್ ಶೀಟ್ ಸ್ಥಳದಲ್ಲೇ ಒದಗಿಸಲಿದ್ದು, ಉಳಿದ ಪರಿಕರಗಳನ್ನು ಅವರೇ ತರತಕ್ಕದ್ದು.

ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡಲಿದ್ದು, ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ, ಪ್ರಶಸ್ತಿ ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಗುವುದು. ಮಧ್ಯಾಹ್ನ 2 ಗಂಟೆಗೆ ಶ್ರೀಮತಿ ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ ಆಯೋಜಿಸಿದ್ದು, ಗುಂಪು ವಿಭಾಗದಲ್ಲಿ ಪ್ರಥಮ ಬಹುಮಾನ 30,000, ದ್ವಿತೀಯ ಬಹುಮಾನ 20,000, ತೃತೀಯ ಬಹುಮಾನ 15,000 ಹಾಗೂ ವೈಯುಕ್ತಿಕ ವಿಭಾಗದಲ್ಲಿ ಪ್ರಥಮ 6,000, ದ್ವಿತೀಯ 4,000, ತೃತೀಯ 3,000 ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಲು ಆನ್ಲೈನ್ ನೋಂದಣಿಗಾಗಿ ಹಾಗೂ ಸ್ಫರ್ಧೆಯ ವಿವರಗಳು ಮಹಾಲಕ್ಷ್ಮೀ ಬ್ಯಾಂಕಿನ ವೆಬ್ಸೈಟ್ www.mahalakshmicoopbank.com ನಲ್ಲಿ ಲಭ್ಯವಿದ್ದು ಆನ್ಲೈನ್ ಮೂಲಕ ನೋದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9972120332  ಸಂಪರ್ಕಿಸಬಹುದು. ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ಯಶ್ ಪಾಲ್ ಎ. ಸುವರ್ಣ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles