Thursday, March 5, 2026

spot_img

ಇಸ್ಪೀಟು ಜುಗಾರಿ ಆಟ : ನಾಲ್ವರ ಬಂಧನ

ಉಡುಪಿ: ಇಸ್ಪೀಟು ಜುಗಾರಿ ಆಟದಲ್ಲಿ ತೊಡಗಿದ್ದ ನಾಲ್ವರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿ, ನಗದು ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅನಿಲ್ (31), ಪೂರ್ಣೇಶ್ (25), ರಘು (39), ಯೋಗೀಶ (39) ಬಂಧಿತರು.

ಕುಂದಾಪುರದ ಪೊಲೀಸ್ ರಿಗೆ ಇಸ್ಪೀಟು ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ, ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಮರಾಸಿ ರಸ್ತೆಯ ಹಾಡಿಯಲ್ಲಿ ಧಾಳಿ ನಡೆಸಿದ್ದಾರೆ. ಧಾಳಿಯ ವೇಳೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಇಟ್ಟು ಅಂದರ್–ಬಾಹರ್ ಇಸ್ಪೀಟು ಆಟವಾಡುತ್ತಿದ್ದ ನಾಲ್ವರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಘಟನಾ ಸ್ಥಳದಿಂದ ನಗದು, ಇಸ್ಪೀಟ್ ಆಟಕ್ಕೆ ಬಳಸುವ ವಸ್ತುಗಳು, ಮೋಬೈಲ್ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles