ಉಡುಪಿ : ಹಿರಿಯಡಕ ಆತ್ರಾಡಿ ಪರೀಕ ಎಂಬಲ್ಲಿ ದನಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ವಾಹನವನ್ನು ಸ್ವಾಧೀನಪಡಿಸಿಕೊಂಡ ಘಟನೆ ನಡೆದಿದೆ. ಕಾಪೂ ಮೂಡಬೆಟ್ಟು ನಿವಾಸಿ ಮೆಹಬೂಬ್ ಸಾಹೇಬ್(65), ಸುಳ್ಯ ನಿವಾಸಿ ಪದ್ಮನಾಭ(57) ಬಂಧಿತ ಆರೋಪಿಗಳು.

ಇದೇ ಜುಲೈ ೩೦ರಂದು ಆತ್ರಾಡಿ ಪರೀಕ ಎಂಬಲ್ಲಿ ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗೆ ತೆಗೆದುಕೊಂಡು ಹೋಗುವ ಬಗ್ಗೆ ಪೊಲೀಸ್‌ರಿಗೆ ದೊರೆತ ಮಾಹಿತಿಯಂತೆ ಪರೀಕ ಶಿವಗುಂಡಿ ಎಂಬಲ್ಲಿಗೆ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡಿ ಹಿಂಸೆಯಾಗುವ ರೀತಿಯಲ್ಲಿ ತುಂಬಿಸುತ್ತಿರುವುದು ಪತ್ತೆಯಾಗಿದೆ. ಪೊಲೀಸ್ ರು ಆರೋಪಿಗಳನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ್ದ ಪಿಕಪ್ ವಾಹನ, ಒಂದು ದನ ಹಾಗೂ 1 ಕರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಕುರಿತು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


