ಉಡುಪಿ : ಅಂತರಾಷ್ಟ್ರೀಯ ಕಾರ್ಯಕ್ರಮದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು
ಸಂಶೋಧನಾ ಕೇಂದ್ರ, ಕುತ್ಫಾಡಿ, ಉಡುಪಿಯಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಮಮತಾ ಕೆ.ವಿ.ಯವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಕ್ರೀಡಾಪಟುಗಳ
ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಆಯುರ್ವೇದ ಮುಖ್ಯ ಪಾತ್ರವಹಿಸುತ್ತದೆ. ಕ್ರೀಡೆಗೆ ಸಂಬಂಧಪಟ್ಟ,
ಹೊರದೇಶಗಳಲ್ಲಿ ವಾಸಿಯಾಗದ ಕಾಯಿಲೆಗಳನ್ನು ಭಾರತ ದೇಶದ ಕೇರಳ ರಾಜ್ಯದ ಆಯುರ್ವೇದ ಚಿಕಿತ್ಸೆಗಳಿಂದ
ನಿವಾರಿಸಲಾಗಿದೆ. ಹಾಗಾಗಿ ಸಂಸ್ಥೆಯ ಎಲ್ಲಾ ವಿಭಾಗಗಳಿಂದ ಅಲ್ಪಾವಧಿಯಲ್ಲೂ ಅತ್ಯಂತ ಸಂಕ್ಷಿಪ್ತ ರೀತಿಯಲ್ಲಿ ಮುಖ್ಯ
ವಿಷಯಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಜರ್ಮನಿಯ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು
ಪಡೆಯಬೇಕೆಂದು ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ನಾಗರಾಜ್ ಎಸ್. ಆಗಮಿಸಿರುವ ವಿದ್ಯಾರ್ಥಿಗಳು ಸಿದ್ಧಾಂತಿಕ ಹಾಗು ಪ್ರಾಯೋಗಿಕ ಪಠ್ಯ ಕ್ರಮವನ್ನು ಕೂಲಂಕುಶವಾಗಿ ತಿಳಿದು ತಮ್ಮ ಜೀವನ ಹಾಗೂ ಕಾರ್ಯಕ್ಷೇತ್ರದಲ್ಲಿ ಆಯುರ್ವೇದವನ್ನು ಅಳವಡಿಸಬೇಕೆಂದು ಕರೆ ನೀಡಿದರು. ಆಂತರಾಷ್ಟ್ರೀಯ ವಿದ್ಯಾರ್ಥಿ ಕೋಶದ, ಅಸೋಸಿಯೇಟ್ ಡೀನ್ ರವರಾದ ಡಾ. ಅನಿರುದ್ಧರವರು ತರಬೇತಿ ಕಾರ್ಯಕ್ರಮದ ಕಾರ್ಯವೈಕರ್ಯಗಳನ್ನು ವಿವರಿಸುತ್ತಾ ಮಾರ್ಚ್ ತಿಂಗಳ ೧೦ ರಿಂದ ೨೯ರ ವರೆಗಿನ ತರಬೇತಿಯ ರೂಪರೇಶೆಯನ್ನು ತಿಳಿಸಿದರು. ಒಂಭತ್ತು ಆಂತರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಪರಿಚಯವನ್ನು ಮಾಡಿಕೊಂಡರು. ಆಂತರಾಷ್ಟ್ರೀಯ ವಿದ್ಯಾರ್ಥಿ ಕೋಶದ ಡೀನ್ ರವರಾದ ಡಾ. ಪ್ರಸನ್ನ ಮೊಗಸಾಲೆಯವರು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಡಾ.ಸಹನಾ ಶಂಕರಿಯವರು ಧನ್ಯವಾದ ಸಮರ್ಪಿಸಿದರು. ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಷರಣ್ಯ ಹಾಗೂ ಡಾ.ಗೀತಾಂಜಲಿಯವರು ಪ್ರಾರ್ಥಿಸಿದರು. ಸ್ವಸ್ಥವೃತ್ತ ವಿಭಾಗದ ಡಾ.ಸೌಮ್ಯ ಭಟ್, ಕಾರ್ಯಕ್ರಮವನ್ನು ನಿರೂಪಿಸಿದರು.