Thursday, March 19, 2026

spot_img

ಅರಾಟೆ ಸೇತುವೆ ಬಳಿ ದುರಂತ: ಹೊಳೆಯಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದ ಯುವಕ ಮುಳುಗಿ ಸಾವು

ಉಡುಪಿ : ಅರಾಟೆ ಸೇತುವೆ ಸಮೀಪ ಹೊಳೆಯಲ್ಲಿ ಕಪ್ಪೆ ಚಿಪ್ಪು ಹೆಕ್ಕುತ್ತಿದ್ದ ವೇಳೆ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಹಂಗಳೂರಿನ ಚಂದ್ರ (39) ಎಂದು ಗುರುತಿಸಲಾಗಿದೆ.

 ಮಂಗಳವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಚಂದ್ರ ಅವರು ತಮ್ಮ ಸಂಬಂಧಿ ಅಜಿತ್ ಅವರೊಂದಿಗೆ ಅರಾಟೆ ಸೇತುವೆ ಬಳಿ ಮಳಿ ಹೆಕ್ಕಲು ತೆರಳಿದ್ದರು. ಕೆಲ ಹೊತ್ತಿನ ಬಳಿಕ ಚಂದ್ರ ಕಾಣಿಸದೇ ಇದ್ದುದರಿಂದ ಅಜಿತ್ ಅವರು ಸ್ಥಳದಲ್ಲೇ ಹಾಗೂ ಸುತ್ತಮುತ್ತ ಹುಡುಕಾಟ ನಡೆಸಿದರು.

ಬುಧವಾರ ಬೆಳಿಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ, ಸುಮಾರು 9.45 ಗಂಟೆಗೆ ಅರಾಟೆ ಸೇತುವೆ ಬಳಿ ಹೊಳೆಯಲ್ಲಿ ಚಂದ್ರ ಅವರ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles