Tuesday, July 1, 2025

spot_img

ಕದ್ದ ಚಿನ್ನದ ಸಹಿತ 700 ಕಿ.ಮೀ. ಪ್ರಯಾಣಿಸಿದ್ದ ದರೋಡೆಕೋರರು….!

ಮಂಗಳೂರು

   ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್​ನಲ್ಲಿ ದರೋಡೆ ಮಾಡಿದ ನಂತರ ದುಷ್ಕರ್ಮಿಗಳು ಕದ್ದ ಗೋಣಿ ಚಿನ್ನದ ಸಹಿತ 700 ಕಿ.ಮೀ ಕಾರಿನಲ್ಲೇ ಪ್ರಯಾಣಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮಂಗಳೂರಿನಿಂದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದ ದರೋಡೆಕೋರರು ತಮಿಳುನಾಡಿನ ತಿರುನಲ್ವೇಲಿಗೆ ಪ್ರಯಾಣಿಸಿದ್ದರು. ತಮಿಳುನಾಡು ತಲುಪಿದ ಬಳಿಕ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನದ ಜೊತೆ ಪರಾರಿಯಾಗಿದ್ದರು.

   ಪ್ರಮುಖ ಅರೋಪಿ ಮುರುಗಂಡಿ ದೇವರ್ ತಿರುನಲ್ವೇಲಿ ತನಕ ಕಾರು ಚಲಾಯಿಸಿದ್ದ. ದರೋಡೆಕೋರರು ಪರಾರಿಯಾಗಲು ಬಳಸಿದ್ದು ಮಹಾರಾಷ್ಟ್ರ ಮೂಲದ ಫಿಯೇಟ್ ಕಾರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಮುಂಬೈ ಹಾಗೂ ತಮಿಳುನಾಡು ಮೂಲದ ನಟೋರಿಯಸ್ ಗ್ಯಾಂಗ್ ದರೋಡೆ ಮಾಡಿದೆ.
   ಕೋಟೆಕಾರು ಬ್ಯಾಂಕ್ ದರೋಡೆಯ ಕಿಂಗ್​ಪಿನ್ ಮುರುಗಂಡಿ ದೇವರ್ ಎರಡು ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ. ಕೋಟೆಕಾರು ಬ್ಯಾಂಕ್ ಪರಿಸರದಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಆ ಬಳಿಕ ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡಿಗೆ ತೆರಳಿದ್ದ. ಆ ಬಳಿಕ ದರೋಡೆಗೆ ಪಕ್ಕಾ ಪ್ಲಾನ್ ಮಾಡಿಕೊಂಡು ತಂಡದ ಜೊತೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದರೋಡೆ ಮಾಡುವುದಕ್ಕೆಂದು ರಾಜೇಂದ್ರನ್, ಕಣ್ಣನ್ ಮಣಿ ಹಾಗೂ ಇತರೆ ಅರು ಜನರ ಜೊತೆ ಮುರುಗಂಡಿ ದೇವರ್ ಬಂದಿದ್ದ. ಆದರೆ, ಐದು ಜನರಷ್ಟೇ ಫಿಯೇಟ್ ಕಾರಿನಲ್ಲಿ ಬಂದು ದರೋಡೆ ಮಾಡಿದ್ದರು. ಓರ್ವ ಬೇರೆ ಜಾಗದಲ್ಲಿ ನಿಂತು ದರೋಡೆಗೆ ನೆರವು ನೀಡಿದ್ದ. 

 

   ದರೋಡೆಕೋರರ ಬಂಧನದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸೋಮವಾರವೇ ಮಾಹಿತಿ ನೀಡಿದ್ದು, ದರೋಡೆಕೋರರನ್ನು ಹೇಗೆ ಟ್ರ್ಯಾಕ್ ಮಾಡಿ ಬಂಧಿಸಲಾಯ್ತು ಎಂಬುದನ್ನು ವಿವರಿಸಿದ್ದಾರೆ. ಕರ್ನಾಟಕ ಗುಪ್ತಚರ ಇಲಾಖೆ ಕೂಡ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಲು ಸಹಾಯ ಮಾಡಿತ್ತು. ಬಂಧಿತರಿಂದ ಚಿನ್ನದ ಜತೆಗೆ ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles