Saturday, June 28, 2025

spot_img

ಗುಬ್ಬಿಯಲ್ಲಿ ಜ.10ರಿಂದ 12ರ ವರೆಗೆ ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ

ಗುಬ್ಬಿ :

     ಕಳೆದ 40 ವರ್ಷಗಳಿಂದಲೂ ಗ್ರಾಮೀಣ ಬಾಗದ ಮಕ್ಕಳನ್ನು ಕ್ರೀಡೆಗೆ ಪ್ರೋತ್ಸಾಹಿಸುತ್ತಾ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಗುಬ್ಬಿಯ ಹೆಸರನ್ನು ಕೊಂಡೊಯ್ದಿರುವ ಗುಬ್ಬಿಯ ಏಕೈಕ ಸಂಸ್ಥೆ ಎಂದರೆ ಅದು ಎಸ್ ಸಿ ವೈ ಸಿ ಈ ಸಂಸ್ಥೆಯಲ್ಲಿ ಖೊ ಖೋ, ಕಬಡಿ ವಾಲಿಬಾಲ್,

    ಆಡಿರುವ ಮಕ್ಕಳು ಕ್ರೀಡಾ ಕೋಟಾ ದಲ್ಲಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇಂತಹ ಸಂಸ್ಥೆ ಇಡೀ ಜಿಲ್ಲೆಯಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಗಳಿಸಿದೆ ಎಂದರೆ ತಪ್ಪಾಗಲಾರದು.ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಶಂಕರ್ ಕುಮಾರ್ ತಮ್ಮ ಜೇವನವನ್ನೇ ಈ ಸಂಸ್ಥೆಯಲ್ಲಿ ಕಲಿಯುವ ಮಕ್ಕಳಿಗಾಗಿ ಮುಡಿಪಾಗಿಟ್ಟಿದ್ದಾರೆ.

    ಪ್ರತಿ ವರ್ಷ ಸಂಸ್ಥೆಯು ರಾಜ್ಯ ಮಟ್ಟದ ಆಹ್ವಾನಿತ ಖೊ ಖೋ ಪಂದ್ಯಾವಳಿಗಳನ್ನು ನೆಡೆಸುತ್ತಾ ಬಂದಿದ್ದು ಈಗ 39 ನೇಕ್ರೀಡಾ ಕೂಟವನ್ನು ಇದೆ ತಿಂಗಳ 10ನೇ ತಾರೀಕಿನಿಂದ 12ನೇ ತಾರೀಕಿನವರೆಗೆ ನೆಡೆಯುತ್ತಿದ್ದು ಈ ಬಗ್ಗೆ ಕ್ರೀಡಾಕೂಟದ ಸಮೀತಿ ಅಧ್ಯಕ್ಷ ಜಿ ಎನ್ ಬೆಟ್ಟಸ್ವಾಮಿ ಮಾಹಿತಿ ತಿಳಿಸಿರುತ್ತಾರೆ.

     ರಾಜ್ಯಮಟ್ಟದ ಕೊಕ್ಕೊ ಕ್ರೀಡಾಕೂಟದಲ್ಲಿ ಸುಮಾರು‌ 48 ತಂಡಗಳಿಂದ‌ 1200 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದು , ಕ್ರೀಡಾಪಟುಗಳಿಗೆ 4 ದಿನ ಉಚಿತ ಊಟ , ಹಾಗೂ ವಸತಿ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

   ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ 1 ಲಕ್ಷ ‌ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಕ್ರೀಡಾ ಕೂಟದಲ್ಲಿ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles