Thursday, March 5, 2026

spot_img

ಗನ್ ಲೈಸೆನ್ಸ್ ರದ್ದು ಮಾಡಬೇಡಿ : ಪೊಲೀಸರಿಗೆ ದರ್ಶನ್ ಮನವಿ

ಬೆಂಗಳೂರು:

   ರೇಣುಕಾಸ್ವಾಮಿ ಕೊಲೆ ಅರೋಪದಲ್ಲಿ ಚಿತ್ರನಟ ದರ್ಶನ್ ಬಂಧನವಾದಾಗಲೇ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿರುವ ಪಿಸ್ಟಲ್ ಮುಟ್ಟುಗೋಲು ಹಾಕಿಕೊಂಡು ಗನ್ ಲೈಸೆನ್ಸ್ ರದ್ದು ಮಾಡಬೇಕೆಂಬ ನಿರ್ಧಾರವನ್ನು ಪೊಲೀಸರು ತೆಗೆದುಕೊಂಡಿದ್ದರು. ಅವರು ಜೈಲಲ್ಲಿದ್ದ ಕಾರಣ ವಿಷಯ ಕೊಂಚ ನೆನೆಗುದಿಗೆ ಬಿದ್ದಿದ್ದು ಸತ್ಯ. ಈಗ ಅವರು ಜಾಮೀನು ಪಡೆದು ಹೊರಬಂದಿರುವ ಹಿನ್ನೆಲೆಯಲ್ಲಿ ತಮ್ಮ ಬಳಿಯಿರುವ ಪಿಸ್ಟಲ್ ಬಳಸಿ ಸಾಕ್ಷಿಗಳನ್ನು ಹೆದರಿಸುವ ಸಾಧ್ಯತೆ ಇದೆ, ಹಾಗಾಗಿ ಅವರ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು ಎಂದು ಜನವರಿ 7ರಂದು ನಟನಿಗೆ ಪೊಲೀಸರು ನೋಟೀಸೊಂದನ್ನು ನೀಡಿದ್ದರು. ನೋಟೀಸ್ ಗೆ ಉತ್ತರಿಸಿರುವ ದರ್ಶನ್ ಲೈಸನ್ಸ್ ರದ್ದು ಮಾಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles