Saturday, October 17, 2026

spot_img

ನವರಾತ್ರಿ ಪರ್ವಕಾಲದಲ್ಲಿ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ವ್ಯಾಸಪೂಜೆ

ಉಡುಪಿ: ನವರಾತ್ರಿ ಪರ್ವಕಾಲದ ಅಂಗವಾಗಿ ಪರ್ಯಾಯ ಶ್ರೀ ಶೀರೂರು ಮಠದ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣ ಮಠದ ಚಂದ್ರಶಾಲೆಯಲ್ಲಿ ವ್ಯಾಸಪೂಜೆಯನ್ನು ನೆರವೇರಿಸಿದರು.

ಚಂದ್ರಶಾಲೆಯ ಚಿನ್ನದ ಮಂಟಪದಲ್ಲಿರುವ ಸ್ವರ್ಣಪೀಠದಲ್ಲಿ ಶ್ರೀ ವೇದವ್ಯಾಸ ದೇವರನ್ನು ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು.

ಮೂರು ದಿನಗಳ ಕಾಲ ನಡೆಯುವ ಈ ವಿಶೇಷ ಪೂಜೆಯಲ್ಲಿ ಆಚಾರ್ಯ ಮಧ್ವರ ಕೃತಿಗಳು ಹಾಗೂ ತಾಳೆಗರಿಗಳನ್ನು ಇರಿಸಿ ಪೂಜಿಸಲಾಗುತ್ತದೆ. ನವರಾತ್ರಿಯ ಶಾರದಾ ಪೂಜೆಯ ಅಂಗವಾಗಿ ಮಠದ ಸಂಪ್ರದಾಯದಂತೆ ವ್ಯಾಸಪೂಜೆಯನ್ನು ನೆರವೇರಿಸಲಾಗುತ್ತದೆ. ಮಠೀಯ ಸಂಪ್ರದಾಯದ ಪ್ರಕಾರ, ಮೂರು ದಿನಗಳ ಕಾಲ ಪ್ರತಿದಿನ ಮೂರು ಹೊತ್ತು ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ವ್ಯಾಸಪೂಜೆ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles