ಉಡುಪಿ : ಅಜ್ಜರಕಾಡು ಜಿಲ್ಲಾಸ್ಪತ್ರೆ ಎದುರಿನ ಮುಖ್ಯರಸ್ತೆಯಲ್ಲಿ ಆಯಿಲ್ ಸೋರಿಕೆಯಾಗಿ ವಾಹನಗಳು ಜಾರಿದ ಪರಿಣಾಮ ಕೆಲವು ವಾಹನಗಳು ನಿಯಂತ್ರಣ ತಪ್ಪಿ ಬಿದ್ದ ಘಟನೆ ಬುಧವಾರ ನಡೆದಿದೆ.

ಬೈಕ್ನಲ್ಲಿ ಆಯಿಲ್ ಕ್ಯಾನ್ ಸಾಗಿಸುತ್ತಿದ್ದ ವೇಳೆ ಕ್ಯಾನ್ ರಸ್ತೆಗೆ ಬಿದ್ದು ಆಯಿಲ್ ಸೋರಿಕೆಯಾಗಿರುವುದು ತಿಳಿದುಬಂದಿದೆ. ವಿಷಯ ತಿಳಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ವಿನಾಯಕ ಕಲ್ಗುಟ್ಟಿಕರ್ ನೇತೃತ್ವದ ತಂಡವು ರಸ್ತೆಗೆ ನೀರು ಸಿಂಪಡಿಸಿ ಆಯಿಲ್ ತೆರವುಗೊಳಿಸುವ ಮೂಲಕ ಹೆಚ್ಚಿನ ಅಪಾಯ ಸಂಭವಿಸುವುದನ್ನು ತಪ್ಪಿಸಿತು.


