ಉಡುಪಿ : ಪಶ್ಚಿಮ ಬಂಗಾಳ ಸೇರಿದಂತೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಭಾರತೀಯ ಜನತಾ ಪಕ್ಷ ಹಾಗೂ ಎನ್‌ಡಿಎಗೆ ಹೊಸ ಉತ್ಸಾಹ ತಂದಿದೆ” ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿರೀಕ್ಷೆ ಮೀರಿದ ಪಶ್ಚಿಮ ಬಂಗಾಳದ ಗೆಲುವು ದೇಶ ಗೆದ್ದ ಅನುಭವವನ್ನು ನೀಡಿದೆ. ದೀದಿ ಸರ್ಕಾರ ಕೇವಲ ಬಿಜೆಪಿ ಅಥವಾ ಪ್ರಧಾನಿ ಮೋದಿ ವಿರೋಧಿಯಾಗಿರಲಿಲ್ಲ; ಅದು ರಾಷ್ಟ್ರ ವಿರೋಧಿ, ಸ್ತ್ರೀ ವಿರೋಧಿ ಹಾಗೂ ಹಿಂದೂ ವಿರೋಧಿ ಸರ್ಕಾರವಾಗಿತ್ತು. ಅಂತಹ ಸರ್ಕಾರದ ನಿರ್ಗಮನದಿಂದ ದೇಶ ಮೊದಲೇ ಎಂಬ ರಾಷ್ಟ್ರಭಕ್ತರು ನಿಟ್ಟುಸಿರು ಬಿಡುವಂತಾಗಿದೆ ಎಂದರು.

ಅಸ್ಸಾಂ ಹಾಗೂ ಪುದುಚೇರಿಯ ಫಲಿತಾಂಶಗಳನ್ನೂ ಉಲ್ಲೇಖಿಸಿದ ಅವರು, ತಮಿಳುನಾಡು ಮತ್ತು ಕೇರಳದ ಫಲಿತಾಂಶ ಏನೇ ಆಗಿರಲಿ, ಒಟ್ಟಾರೆ ಎನ್‌ಡಿಎ ತನ್ನ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿಕೊಂಡಿದೆ. ಕರ್ನಾಟಕದ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಆಡಳಿತ ಪಕ್ಷ ಗೆದ್ದಿದೆ ಎನ್ನುವುದಕ್ಕಿಂತ ಹಣಬಲ ಗೆದ್ದಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಆದರೂ ಜನಾದೇಶವನ್ನು ಗೌರವಿಸುತ್ತೇವೆ. ಇಂದಿನ ಚುನಾವಣೆ ಭಾರತೀಯ ಜನತಾ ಪಕ್ಷದ ಸಂಘಟನಾ ಶಕ್ತಿಯನ್ನು ಇನ್ನಷ್ಟು ಬಲಪಡಿಸಲಿದೆ” ಎಂದು ತಿಳಿಸಿದ್ದಾರೆ.



