Monday, April 27, 2026

spot_img

ಬೈನೆ ಮರಗಳ ಅತಿಯಾದ ಕೊಯ್ಲು: ಕರಾವಳಿ ಪರಿಸರಕ್ಕೆ ಭೀತಿ

ಉಡುಪಿ : ಕರಾವಳಿಯ ಪ್ರಕೃತಿಯ ಅಮೂಲ್ಯ ಸಂಪತ್ತಾಗಿರುವ ಬೈನೆ ಮರಗಳು ಅತಿಯಾದ ವ್ಯಾಪಾರಿಕ ಬಳಕೆಯಿಂದ ಅಪಾಯದ ಅಂಚಿನಲ್ಲಿವೆ. ವಿಶೇಷವಾಗಿ ಬೈನೆ ಹಣ್ಣಿನ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮರಗಳ ಸಂರಕ್ಷಣೆ ಕುರಿತ ಆತಂಕ ಹೆಚ್ಚಾಗಿದೆ. ಕರಾವಳಿಯಲ್ಲಿ ಸಹಜವಾಗಿ ಬೆಳೆಯುವ ಬೈನೆ ಮರಗಳಿಂದ ಹಣ್ಣುಗಳ ಗೊಂಚಲುಗಳನ್ನು ಸಂಪೂರ್ಣವಾಗಿ ಕತ್ತರಿಸಿ ಮಾರಾಟ ಮಾಡುವ ಪ್ರಕ್ರಿಯೆ ಇತ್ತೀಚೆಗೆ ಹೆಚ್ಚಾಗಿದೆ. ಈ ಹಣ್ಣುಗಳನ್ನು ಮುಖ್ಯವಾಗಿ ಕೇರಳ ಹಾಗೂ ಬೆಂಗಳೂರು ಪ್ರದೇಶಗಳಿಗೆ ಸಾಗಿಸಲಾಗುತ್ತಿದ್ದು, ಶುಭಕಾರ್ಯಗಳು ಮತ್ತು ಅಲಂಕಾರಿಕ ಬಳಕೆಗೆ ಹೆಚ್ಚಿನ ಬೇಡಿಕೆ ಇದೆ.

ಆದರೆ ಈ ಕ್ರಮದಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಂಗಗಳು, ಹಾರ್ನ್‌ಬಿಲ್ ಪಕ್ಷಿಗಳು ಸೇರಿದಂತೆ ಹಲವು ಪ್ರಾಣಿ–ಪಕ್ಷಿಗಳಿಗೆ ಬೈನೆ ಹಣ್ಣು ಪ್ರಮುಖ ಆಹಾರವಾಗಿದ್ದು, ವಸಂತಕಾಲದಲ್ಲಿ ಅವುಗಳಿಗೆ ಆಹಾರ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹಣ್ಣುಗಳ ಗೊಂಚಲುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದರಿಂದ ಜೀವ ವೈವಿಧ್ಯಕ್ಕೂ ಧಕ್ಕೆಯಾಗುತ್ತಿದೆ.

ಕಾರ್ಯೋಟ ಯುರೆನ್ಸ್‌ ಎಂಬ ವೈಜ್ಞಾನಿಕ ಹೆಸರಿನ ಬೈನೆ ಮರಗಳು ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಗಮನಾರ್ಹವಾಗಿದೆ. ಹಿಂದೆ ಸೇಂದಿ ತೆಗೆಯಲು ಬಳಸುತ್ತಿದ್ದ ಈ ಮರಗಳು ಈಗ ವ್ಯಾಪಾರಿಕ ಹಣ್ಣಿನ ಮೂಲವಾಗಿ ಬಳಸಲ್ಪಡುತ್ತಿವೆ. ಮಧ್ಯವರ್ತಿಗಳ ಮೂಲಕ ಹೊರರಾಜ್ಯದ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿರುವುದು ಪರಿಸರದ ಮೇಲೆ ಒತ್ತಡ ತಂದಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಬೈನೆ ಹಣ್ಣಿನ ಅತಿಯಾದ ಕೊಯ್ಲು ಮತ್ತು ಮಾರಾಟವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರಿಯರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles