Friday, April 17, 2026

spot_img

ವಿಶ್ವ ಆರೋಗ್ಯ ದಿನಾಚರಣೆ: ಬೀದಿ ನಾಟಕದ ಮೂಲಕ ಆರೋಗ್ಯ ಜಾಗೃತಿ..

ಉಡುಪಿ : ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳ ವತಿಯಿಂದ ಆರೋಗ್ಯವೇ ಭಾಗ್ಯ ಎಂಬ ವಿಷಯದ ಕುರಿತು ಕೋಟದ ವರುಣತೀರ್ಥ ಕೆರೆಯ ಪಕ್ಕದಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್‌ ನಾಯಕ, ಕೋಟ ಲತಾ ಹೋಟಲ್ ಮಾಲಕರಾದ ವೆಂಕಟೇಶ್ ಪ್ರಭು, ಕೋಟ ಸಿ.ಎ. ಬ್ಯಾಂಕ್ ನಿರ್ದೇಶಕರಾದ ರಂಜಿತ್ ಕುಮಾರ್ ಚಂದ್ರಶೇಖರ ಆಚಾರ್, ಅಮೃತೇಶ್ವರಿ ದೇವಸ್ಥಾನ ಕೋಟದ ವ್ಯವಸ್ಥಾಪನಾ ಸಮಿತಿ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಶ್ರದ್ಧಾ ಅವರ ಪ್ರಸ್ತುತಿಯಲ್ಲಿ ಬೀದಿ ನಾಟಕ ಮೂಡಿ ಬಂದಿದ್ದು, ಆರೋಗ್ಯದ ಮಹತ್ವದ ಕುರಿತು ಪರಿಣಾಮಕಾರಿ ಸಂದೇಶ ನೀಡಿತು. ರೋವರ್ಸ್‌ ನಾಯಕ ಸಂತೋಷ್ ನಾಯ್ಕ್ ಹೆಚ್ ಹಾಗೂ ರೇಂಜರ್ಸ್ ನಾಯಕಿ ಸೌಮ್ಯ ಕೆ.ಇವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಗಿದ್ದು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles