ಉಡುಪಿ : ರಂಗೋಲಿ ಕಲಾವಿದೆ ಹಾಗೂ ಸಂಶೋಧಕಿ ಡಾ. ಭಾರತಿ ಮರವಂತೆಯವರಿಗೆ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರೀಯ ದೃಶ್ಯ ಕಲಾ ಅಕಾಡೆಮಿ ಧಾರವಾಡ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಧಾರವಾಡದ ಜೆ.ಎಸ್.ಎಸ್. ಹಾಲಭಾವಿ ಸ್ಕೂಲ್ ಆಫ್ ಆರ್ಟ್ ನಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ರಂಗೋಲಿ ಕ್ಷೇತ್ರದಲ್ಲಿ ಸಂಶೋಧನೆ, ಚಿತ್ರಕಲೆ, ಪ್ರದರ್ಶನ ಪ್ರಾತ್ಯಕ್ಷಿಕೆ, ಲೇಖನ–ಉಪನ್ಯಾಸ, ಕೃತಿಗಳು, ನಿಘಂಟು, ಕಿರುಯೋಜನೆಗಳು, ವಿಶ್ವದಾಖಲೆ ಹಾಗೂ ಫೆಲೋಶಿಪ್ ಸೇರಿದಂತೆ ವೈವಿಧ್ಯಮಯ ಸಾಧನೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಡಾ. ಭಾರತಿ ಮರವಂತೆ ಅವರು ಪ್ರಸ್ತುತ ಡಾ. ಶಿವರಾಮ ಕಾರಂತ ಟ್ರಸ್ಟ್ನ ಸದಸ್ಯೆಯಾಗಿದ್ದಾರೆ.



