ಉಡುಪಿ: ಹೆಜಮಾಡಿ ಸಮೀಪದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನೇಮೋತ್ಸವದ ವೇಳೆ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ ತಮಿಳುನಾಡು ಮೂಲದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಶೀಥಲ್, ಕಾಳಿಯಮ್ಮ ಹಾಗೂ ಮಾರಿ (40) ಬಂಧಿತ ಆರೋಪಿಗಳು.

ನೇಮೋತ್ಸವದ ಜನಸಂದಣಿಯ ನಡುವೆಯೇ ಹೆಜಮಾಡಿ ನಿವಾಸಿ ಕಮಲ ಅವರ ಚಿನ್ನದ ಸರವನ್ನು ಎಗರಿಸಿದ್ದ ಘಟನೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವೀಡಿಯೊ ವೈರಲ್ ಆಗಿತ್ತು.

ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.



