ಉಡುಪಿ : ಬೈಂದೂರು ವಿಧಾನಸಭಾ ಕ್ಷೇತ್ರದ ನಾಲ್ಕು ಶಾಲೆಗಳ ಕಿಶೋರ ಯಕ್ಷಗಾನ ಪ್ರದರ್ಶನಗಳು ವಂಡ್ಸೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಾಂಸ್ಕೃತಿಕ ಸಭಾಭವನದಲ್ಲಿ ಯಶಸ್ವಿಯಾಗಿ ಸಮಾಪನಗೊಂಡವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜೀವ ಶೆಟ್ಟಿ, ಬಿಜ್ರಿ ವಹಿಸಿದ್ದರು.

ಯಕ್ಷಶಿಕ್ಷಣ ಪಡೆದ ವಿದ್ಯಾರ್ಥಿನಿಯರಾದ ತನುಶ್ರೀ, ಅನನ್ಯಾ, ಪ್ರಣತಿ, ಐಶ್ವರ್ಯ, ಮನಸ್ವಿ ಮತ್ತು ಸೃಷ್ಟಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ತಲ್ಲೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ಕಂಸ ದಿಗ್ವಿಜಯ – ಕಂಸ ವಧೆ’ ಹಾಗೂ ಹೆಮ್ಮಾಡಿಯ ಜನತಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ದ್ರೌಪದಿ ಪ್ರತಾಪ’ ಯಕ್ಷಗಾನ ಪ್ರದರ್ಶನಗಳು ಮೆಚ್ಚುಗೆಗೆ ಪಾತ್ರವಾದವು.

ಮುಖ್ಯ ಅತಿಥಿಗಳಾಗಿ ಎಂ. ಗಂಗಾಧರ ರಾವ್, ರಾಘವೇದ್ರ ನೆಂಪು, ರವಿರಾಜ ಶೆಟ್ಟಿ, ರಮೇಶ್ ದೇವಾಡಿಗ, ಅನಿಲ್ ಮೆಂಡನ್, ಶಾಂತಿಸಾಗರ ಶೆಟ್ಟಿ, ಎನ್. ಸಂತೋಷ್ ಕುಮಾರ್ ಶೆಟ್ಟಿ, ಕುಪ್ಪಯ್ಯ ಮರಾಠಿ ಹಾಗೂ ಕೃಷ್ಣರಾಜ ಭಟ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಸವಿತಾ, ಶ್ರೀಮತಿ ಬೀರಮ್ಮ, ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಭಟ್ ವಂದಿಸಿದರು. ಚಿತ್ತೂರು ರವಿರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



