Tuesday, March 3, 2026

spot_img

ಮಹಿಳೆ ನಾಪತ್ತೆ – ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಉಡುಪಿ: ಉಡುಪಿ ನಗರದ ಸಮೀಪದ ಕುಂಜಿಬೆಟ್ಟು ಪ್ರದೇಶದಲ್ಲಿ ವಾಸವಿದ್ದ ಮಹಿಳೆಯೊಬ್ಬರು ಮನೆಯಿಂದ ಹೊರಗೆ ಹೋದ ಬಳಿಕ ವಾಪಸ್ಸು ಬಾರದೇ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಸೀತಾ ನಾಯಕ್ (66) ನಾಪತ್ತೆಯಾದ ಮಹಿಳೆ.

 ಶಿವಳ್ಳಿ ಗ್ರಾಮದ ಕುಂಜಿಬೆಟ್ಟುವಿನಲ್ಲಿರುವ ಸಾಯಿ ರಾಧಾ ನೆಸ್ಟ್ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ ಸೀತಾ ನಾಯಕ್ ಅವರು ಮಾನಸಿಕ ಖಿನ್ನತೆಗೆ ಸಂಬಂಧಿಸಿದ ಔಷಧಿಗಳನ್ನು ಸೇವಿಸುತ್ತಿದ್ದರು ಎನ್ನಲಾಗಿದೆ. ಡಿಸೆಂಬರ್ 16ರಂದು ಅಚಾನಕ್‌ ಮನೆಯಿಂದ ನಾಪತ್ತೆಯಾದವರನ್ನು ಹುಡುಕಾಡಿ, ಅಪಾರ್ಟ್ಮೆಂಟ್‌ನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ, ಮಧ್ಯಾಹ್ನ 1.47ರ ಸುಮಾರಿಗೆ ಸೀತಾ ನಾಯಕ್ ಅವರು ಗೇಟ್ ನಂಬರ್–2 ಮೂಲಕ ನಡೆದುಕೊಂಡು ಹೊರಹೋಗುತ್ತಿರುವ ದೃಶ್ಯ ದಾಖಲಾಗಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ಮಹಿಳೆಯ ಪತ್ತೆಗೆ ಮುಂದಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles