Monday, March 2, 2026

spot_img

ಶಿರಿಯಾರ ಸೇವಾ ಸಹಕಾರಿ ಸಂಘದ 1.70 ಕೋಟಿ ವಂಚನೆ ಪ್ರಕರಣ: ತಲೆಮರೆಸಿಕೊಂಡಿದ್ದ ಗುಮಾಸ್ತ ಆರೋಪಿ ಬಂಧನ..

ಉಡುಪಿ: ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯ 1.70 ಕೋಟಿ ವಂಚನೆ ಪ್ರಕರಣದ ತಲೆಮರೆಸಿಕೊಂಡಿದ್ದ ಮೊದಲನೇ ಆರೋಪಿ ಹರೀಶ್ ಕುಲಾಲ್ (32)ನನ್ನು ಕೋಟ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗುಮಾಸ್ತ, ಜೂನಿಯರ್ ಮ್ಯಾನೇಜರ್‌ ಹರೀಶ್ ಕುಲಾಲ್ ಹಾಗೂ ಮ್ಯಾನೇಜರ್ ಸುರೇಶ್ ಭಟ್ ಅವರುಗಳು ಸಂಘಕ್ಕೆ ಒಟ್ಟು 1 ಕೋಟಿ 70 ಲಕ್ಷ ರೂಪಾಯಿ ಹಣ ವಂಚಿಸಿರುವ ಪ್ರಕರಣ ಕೋಟ ಠಾಣೆಯಲ್ಲಿ ದೂರು ದಾಖಲಾಗಿತ್ತು.

 ಆರೋಪಿ ಸುರೇಶ್‌ ಭಟ್‌ ನನ್ನು ಪೊಲೀಸ್‌ ರು ಬಂಧಿಸಿದ್ದು, ಇನ್ನೋರ್ವ ಆರೋಪಿ ಹರೀಶ್‌ ಕುಲಾಲ್‌ ತಲೆ ಮರೆಸಿಕೊಂಡಿದ್ದ. ಕೋಟ ಪೊಲೀಸ್ ಉಪ ನಿರೀಕ್ಷಕ ಪ್ರವೀಣ ಕುಮಾರ್ ಆರ್ ಅವರು ಮತ್ತು ತಂಡ ಆರೋಪಿಯ ಬೆನ್ನು ಹತ್ತಿ, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles