ಉಡುಪಿ : ಟ್ಯಾಂಕರ್ ಚಾಲಕನೊಬ್ಬ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯರ್ರಾಬಿರ್ರಿಯಾಗಿ ಚಲಾವಣೆ ಮಾಡಿಕೊಂಡು ಬಂದಿದ್ದು ಕೂದಲೆಳೆಯ ಅಂತರದಲ್ಲಿ ಹಲವಾರು ಅಪಘಾತಗಳು ತಪ್ಪಿದ ಘಟನೆ ನಡೆದಿದೆ. ಕೊನೆಯಲ್ಲಿ ಟ್ಯಾಂಕರ್ ಚಾಲಕನನ್ನು ಅಂಬಲಪಾಡಿಯ ಬಳಿ ವಾಹನವನ್ನು ನಿಲ್ಲಿಸಿದ ಸಾಮಾಜಿಕ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿ ಅವರು ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದು ಪೋಲಿಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.

ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದವನಾಗಿದ್ದು, ಬಹಳಷ್ಟು ಮದ್ಯ ಸೇವಿಸಿ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ಬಹಳಷ್ಟು ವೇಗವಾಗಿ ಯರ್ರಾ ಬಿರ್ರಿಯಾಗಿ ಬರುತ್ತಿದ್ದ. ಗಮನಿಸಿದ ಸಾರ್ವಜನಿಕರ ವಾಹನವೊಂದು ಆತನನ್ನು ಹಿಂಬಾಲಿಸಿಕೊಂಡು ಬಂದು ಅಂಬಲಪಾಡಿಯ ಬಳಿ ನಿಲ್ಲಿಸಿದ್ದಾರೆ.

ಬಳಿಕ ಸಾರ್ವಜನಿಕರು ಚಾಲಕನನ್ನು ಥಳಿಸಿದ್ದಾರೆ, ಬಳಿಕ ವಿಶುಶೆಟ್ಟಿಯವರು ಬಂದು ಆತನಿಗೆ ಹಲ್ಲೆಯಾಗುವುದನ್ನು ತಡೆದು ಕೂಡಲೆ ಪೋಲಿಸರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ನಂತರ ರಸ್ತೆಯ ಮದ್ಯದಲ್ಲಿ ನಿಂತಿದ್ದ ಟ್ಯಾಂಕರ್ ಅನ್ನು ಚಾಲಕರೊಬ್ಬರ ಸಹಾಯದಿಂದ ಠಾಣೆಗೆ ತಲುಪಿಸಿದ್ದಾರೆ.



