ಉಡುಪಿ: ನಗರದ ಹಲವೆಡೆ ರಸ್ತೆ ಗುಂಡಿ–ಗುಂಡಿಯಾಗಿ ಸಂಚಾರಕ್ಕೆ ಅಸೌಕರ್ಯ ಉಂಟಾಗುತ್ತಿರುವ ಸಂದರ್ಭದಲ್ಲೇ, ಪುಟಾಣಿ ವಿದ್ಯಾರ್ಥಿಯೊರ್ವ ನೇರವಾಗಿ ನಗರಸಭೆ ಆಯುಕ್ತರ ಬಳಿ ದೂರು ನೀಡಿದ ಘಟನೆ ಕುತೂಹಲಕ್ಕೆ ಕಾರಣವಾಗಿದೆ.

ಡಿಸೆಂಬರ್ ತಿಂಗಳಲ್ಲೂ ಮಳೆ ಮುಂದುವರಿದಿರುವುದರಿಂದ ರಸ್ತೆ ರಿಪೇರಿ ಕೆಲಸಗಳು ನಿಧಾನಗೊಂಡಿವೆ. ಈ ನಡುವೆ “ನಮ್ಮ ಶಾಲೆಯ ರಸ್ತೆ ಸರಿ ಇಲ್ಲ, ದಯವಿಟ್ಟು ಸರಿಪಡಿಸಿ ಎಂದು ಮುಕುಂದ ಕೃಪ ಶಾಲೆಯ ವಿದ್ಯಾರ್ಥಿ ತನ್ಮಯ್ ಕಾಮತ್ ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದಾನೆ.

ಬಾಲಕನ ಮಾತು ಗಮನದಿಂದ ಆಲಿಸಿದ ಆಯುಕ್ತರು, ತಕ್ಷಣ ಕ್ರಮ ತೆಗೆದುಕೊಳ್ಳಿ ರಸ್ತೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಮಕ್ಕಳ ಮನವಿ ಕೂಡ ನಗರಸಭೆಯ ಅಧಿಕಾರಿಗಳ ಗಮನ ಸೆಳೆದು ರಸ್ತೆಯ ಸಮಸ್ಯೆ ಪರಿಹಾರಕ್ಕೆ ಮಾರ್ಗದರ್ಶನ ನೀಡಿರುವುದು ಸ್ಥಳೀಯರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.



