Wednesday, March 4, 2026

spot_img

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭ

ಉಡುಪಿ : ಮಹಾತ್ಮಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಂಡೇರಂಗಡಿ ಕುಕ್ಕುಜೆ ಕಾರ್ಕಳದಲ್ಲಿ ನಡೆಯಿತು.

ಸಮಾರೋಪ  ಸಮಾರಂಭದ ಭಾಷಣಕಾರರಾದ ವಿನಯ್ ಭಟ್ ಕಾರ್ಯಕ್ರಮದಲ್ಲಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಯುವಕರಲ್ಲಿ ಸಾಮಾಜಿಕ ಜಾಗೃತಿ, ಶಿಸ್ತು, ಸೇವಾಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ವಿಶಿಷ್ಟ ವೇದಿಕೆ ಎಂದು ಪ್ರಶಂಸಿಸಿದರು.

 ಮಹಾತ್ಮಗಾಂಧಿ ಸ್ಮಾರಕ ಸಂಘ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿನಾಥ್ ಭಟ್, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಅಶೋಕ್ ಕುಮಾರ್ ದೊಂಡೇರಂಗಡಿ , ದುರ್ಗಾಂಬಾ ಕ್ಲಿನಿಕ್’ನ ಪ್ರಮೋದ್ ಕುಮಾರ್ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯ ದೀಕ್ಷಿತ್ ಶೆಟ್ಟಿ , ದೊಂಡೇರಂಗಡಿ ಗರಡಿ ಅರ್ಚಕ ಚೆಲುವಯ್ಯ ಪೂಜಾರಿ , ಬೈರಂಪಳ್ಳಿ ಹೆಗ್ಡೆ ಕನ್ಸ್ಟ್ರಕ್ಷನ್ ನ ಮಾಲಕ ಗಣೇಶ್ ಹೆಗ್ಡೆ , ದೊಂಡೇರಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ದಯಾನಂದ ನಾಯಕ್, ಕುಕ್ಕುಜೆ ನಿವೃತ್ತ ಮುಖ್ಯೋಪಾಧ್ಯಾಯ ಡಿ ಲಕ್ಷ್ಮಣ್ ಹಾಗೂ ಎನ್. ಎಸ್ .ಎಸ್ ಶಿಬಿರಾಧಿಕಾರಿ ಸನತ್ ಕೋಟ್ಯಾನ್, ರೆಡ್ ಕ್ರಾಸ್ ಶಿಬಿರಾಧಿಕಾರಿ ಕು ದೀಪಿಕಾ ,ರೇಂಜರ್ಸ್ ಶಿಬಿರಾಧಿಕಾರಿ ಸ್ಟಾಲಿನ್ ಡಿ ಸೋಜಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles