Wednesday, March 4, 2026

spot_img

ಒಳಕಾಡುನಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು..

ಉಡುಪಿ : ನಗರದ ಒಳಕಾಡು ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದ ಮನೆಯೊಳಗಿನ ಕಳವು ಪ್ರಕರಣವು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಶೈಲಾ ವಿಲ್ಹೆಲ್ಮೀನಾ (53) ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ.

ಮನೆಯವರು ರಾತ್ರಿ ಊಟದ ಬಳಿಕ ಮಲಗಿದ್ದ ವೇಳೆ, ಕಳ್ಳರು ಮನೆಯಲ್ಲಿ ನುಗ್ಗಿ, ಒಂದು ಕೋಣೆಯಲ್ಲಿದ್ದ ಕಪಾಟನ್ನು ಬಿಚ್ಚಿ ಅದರಲ್ಲಿ ಇರಿಸಿದ್ದ 368 ಗ್ರಾಂ ತೂಕದ, ಸುಮಾರು 44.60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡಿದ್ದಾರೆ.

ಬೆಳಗ್ಗೆ ಚರ್ಚ್‌ಗೆ ತೆರಳುವ ಮುನ್ನ ಚಿನ್ನಾಭರಣಗಳನ್ನು ತೆಗೆದುಕೊಳ್ಳಲು ನೋಡಿದಾಗ ಕಳವು ಸಂಭವಿಸಿರುವುದು ಮನೆಯವರಿಗೆ ಗೊತ್ತಾಗಿದೆ. ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದು, ಕಳ್ಳರ ಸುಳಿವು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles