ಉಡುಪಿ: ಮಣಿಪಾಲ ಆರ್ಎಸ್ಬಿ ಸಭಾಭವನದ ಸಮೀಪದಲ್ಲಿರುವ ಕಟ್ಟಡದಲ್ಲಿನ ಡೆಲ್ಲಿ ಡಾಬಾ ಎಂಬ ಹೊಟೇಲ್ನಲ್ಲಿ ಇಂದು ಸಂಜೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಸಂಭವಿಸಿದೆ.

ಸಿಲಿಂಡರ್ ಅಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಹೊಟೇಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲೇ ಜ್ವಾಲೆಗಳು ಇಡೀ ಹೊಟೇಲ್ಗೆ ವ್ಯಾಪಿಸಿದೆ.

ಸ್ಪೋಟದ ತೀವ್ರತೆ ಹೋಟೆಲ್ ಪಕ್ಕದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿಗೆ ಹಾನಿಯಾಗಿದ್ದು, ಪಕ್ಕದ ಹೋಟೆಲ್ ಗೂ ಹಾನಿಯಾಗಿದೆ. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಉಡುಪಿ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

ಅಲ್ಲದೆ ಹೊಟೇಲ್ನಲ್ಲಿದ್ದ ಇನ್ನೆರಡು ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಳ್ಳದಂತೆ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.



