ಉಡುಪಿ : ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಉಡುಪಿಯ ನ್ಯಾಯಾಲಯದ ಮೆಟ್ಟಿಲಲ್ಲಿ ಕುಳಿತುಕೊಂಡು ಆಕ್ರಂದನ ಮಾಡುತ್ತಾ ನನಗೆ ಬೇಕಾಗುವ ಸೌಲಭ್ಯಗಳು ನೆಮ್ಮದಿ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಮಾಹಿತಿ ಪಡೆದ ಸಮಾಜಸೇವಲ ವಿಶು ಶೆಟ್ಟಿ ಅಂಬಲಪಾಡಿ ನೆರವಿಗೆ ಧಾವಿಸಿ, ವೃದ್ದೆಗೆ ಸಮಾಧಾನದ ಮಾತುಗಳನ್ನಾಡಿ ರಕ್ಷಣೆ ಮಾಡಿದ್ದಾರೆ.

ಈ ಬಗ್ಗೆ ಸಖಿ ಕೇಂದ್ರ, ಹಿರಿಯ ನಾಗರಿಕ ಸಹಾಯವಾಣಿ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ವಿಶು ಶೆಟ್ಟಿ ಮಾಹಿತಿ ನೀಡಿ ಸಖಿ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.

ವೃದ್ದೆಯು ಬಹಳಷ್ಟು ಕಣ್ಣೀರಿಡುತ್ತಿರುವಾಗ ನೈಜ ತೊಂದರೆಯೋ, ವಯೋ ಸಹಜ ಮಾನಸಿಕ ತೊಂದರೆಯೋ ಎಂಬುದು ಸಂಬಂಧಪಟ್ಟವರ ತನಿಖೆಯಿಂದ ತಿಳಿಯಬೇಕಾಗಿದೆ.

ವೃದ್ದೆಗೆ ನ್ಯಾಯಯುತವಾದ ಹಾಗೂ ಸಮಾಧಾನಕರವಾದ ನ್ಯಾಯ ದೊರಕಿಸಿಕೊಡಲಿ ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.



