ಉಡುಪಿ : ಶಿರೂರು ಹೋಬಳಿಯ ಮೊಯಿದ್ದೀನ್‌ಪುರ ಗ್ರಾಮದ ಸರ್ಕಾರಿ ಹಾಡಿಯಲ್ಲಿ ಸಾರ್ವಜನಿಕವಾಗಿ ಇಸ್ಪೀಟು ಜೂಜಾಟ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ಬೈಂದೂರು ಪೊಲೀಸರು ಧಾಳಿ ಮಾಡಿ 6 ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಶೇಖರ (36), ಹರೀಶ್ ನಾಯ್ಕ್ (42), ದೇವೇಂದ್ರ ಜಟ್ಟಪ್ಪ ನಾಯ್ಕ್ (38), ಆಶೋಕ ವೆಂಕಟೇಶ ನಾಯ್ಕ್ (42), ನಾಗಪ್ಪ ಗೊವಿಂದ ನಾಯ್ಕ್ (45), ದಿನಕರ (32) ಬಂಧಿತರು.

ರಾತ್ರಿ 7.45ರ ವೇಳೆ ಮೊಯಿದ್ದೀನ್‌ಪುರ ಗ್ರಾಮದ ಸರ್ಕಾರಿ ಹಾಡಿ ಗೆ ಧಾಳಿ ಮಾಡಿದಾಗ, ಕಪ್ಪು ಟಾರ್ಪಾಲ್ ಹಾಸಿ ಕ್ಯಾಂಡಲ್ ಬೆಳಕಿನಲ್ಲಿ ಅಂದರ್–ಬಾಹರ್ ಹಣ ಪಣವಾಗಿಟ್ಟು ಜೂಜಾಟ ನಡೆಸುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು, 24,010 ರೂಪಾಯಿ ನಗದು, ನಾಲ್ಕು ಬೈಕ್, ಮತ್ತಿತತರ ವಸ್ತುಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



