Wednesday, March 4, 2026

spot_img

ಬನ್ನಂಜೆ ಬಿಲ್ಲವರ ಸೇವಾ ಸಂಘ–ಶ್ರೀನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್ ವತಿಯಿಂದ 431 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಉಡುಪಿ : ಬನ್ನಂಜೆ ಬಿಲ್ಲವರ ಸೇವಾ ಸಂಘ ಹಾಗೂ ಶ್ರೀನಾರಾಯಣಗುರು ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 431 ವಿದ್ಯಾರ್ಥಿಗಳಿಗೆ ಒಟ್ಟು 25 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ ವಿತರಣೆ ಸಮಾರಂಭವು ಬನ್ನಂಜೆ ನಾರಾಯಣ ಗುರು ಆಡಿಯಟೋರಿಯಂನಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ವಿದ್ಯಾನಿಧಿ ಟ್ರಸ್ಟ್ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಲವಾಗುತ್ತಿರುವುದು ಶ್ಲಾಘನೀಯ. ಇಂತಹ ಉಪಕ್ರಮಗಳು ಹೆಚ್ಚಿನ ಮಟ್ಟದಲ್ಲಿ ನಡೆಯಬೇಕು ಎಂದರು

ಉಡುಪಿ ಜ್ಞಾನಸುಧಾ ಪಿಯು ಕಾಲೇಜಿನ ಪ್ರಾಂಶುಪಾಲ ಸಂತೋಷ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಅಧ್ಯಾಪಕರ ಮೇಲೆ ನಂಬಿಕೆ ಇಟ್ಟು ಕಾರ್ಯಪ್ರವೃತ್ತರಾಗಬೇಕು. ಮೂಢನಂಬಿಕೆಗೆ ಜಾಗವಿಲ್ಲದ ಸಮಾಜಮುಖಿ ಚಿಂತನೆ ಹಾಗೂ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹರ್ಷ ಯು. ಪೂಜಾರಿ, ಸಾಯಿ ವೈಷ್ಣವ್ ದಯಾಕರ್ ಮತ್ತು ಪ್ರಣತಿ ಜತ್ತನ್ನ ಅವರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವ ಸನ್ಮಾನ ಪುರಸ್ಕೃತ ವಿಠಲ ಪೂಜಾರಿ, ನಟ ಹಾಗೂ ನಿರ್ದೇಶಕ ಸೂರ್ಯೋದಯ್ ಪೆರಂಪಳ್ಳಿ, ಹಾಗೂ ನಾರಾಯಣಗುರು ಅಭಿವೃದ್ದಿ ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ ಅವರನ್ನು ಗೌರವಿಸಲಾಯಿತು.

 ಬನ್ನಂಜೆ ಬಿಲ್ಲವರ ಸೇವಾ ಸಂಘ ಉಡುಪಿ ಅಧ್ಯಕ್ಷ ಶಶಿಧರ ಎಂ. ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಹರ್ಷ ಸಂಸ್ಥೆಯ ಸೂರ್ಯಪ್ರಕಾಶ್, ಉದ್ಯಮಿ ಪ್ರಭಾಕರ್ ಪೂಜಾರಿ, ಪ್ರಮುಖರಾದ ಸದಾನಂದ ಪೂಜಾರಿ ಬನ್ನಂಜೆ, ಜಿತೇಶ್ ಕುಮಾರ್, ದಯಾನಂದ ಪೂಜಾರಿ ಬನ್ನಂಜೆ (ಗೌರವ ಕಾರ್ಯದರ್ಶಿ), ಜಿ.ಸದಾನಂದ ಅಮೀನ್, ಅಶೋಕ ಪೂಜಾರಿ, ಸುಧಾಕರ ಪೂಜಾರಿ, ಉದಯ ಪೂಜಾರಿ, ಪ್ರವೀಣ್ ಆರ್. ಸುವರ್ಣ, ವಿಶ್ವನಾಥ ಕಲ್ಮಾಡಿ, ಗಣೇಶ್ ಕೋಟ್ಯಾನ್, ಸತೀಶ್ ಅಮೀನ್, ಲಕ್ಷ್ಮಣ ಪೂಜಾರಿ, ಸಂದೀಪ್ ಸನಿಲ್, ಸುಕನ್ಯಾ, ಯು. ದೀಪಕ್ ಕಿರಣ್, ಕೃಷ್ಣಪ್ಪ ಅಂಚನ್, ಎಸ್.ಟಿ. ಕುಂದರ್, ಜಯಕರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles