Wednesday, March 4, 2026

spot_img

ಮನೋಳಿ ಗುಜ್ಜಿ ಬೆಟ್ಟದಲ್ಲಿ ಅಂದರ್-ಬಾಹರ್ ಜೂಜಾಟ ದಾಳಿ: 8 ಮಂದಿ ಬಂಧನ

ಉಡುಪಿ : ಶಿವಳ್ಳಿ ಗ್ರಾಮದ ಮನೋಳಿ ಗುಜ್ಜಿ ಬೆಟ್ಟದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಮಣಿಪಾಲ ಪೊಲೀಸರು ದಾಳಿ ನಡೆಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.

ನವೀನ್ (37), ಭಾಸ್ಕರ್ (55), ಕೃಷ್ಣ (27), ಜಗದೀಶ, ಸಂತೋಷ್ (42), ಶಂಕರ ಪೂಜಾರಿ (42), ಮಂಜುನಾಥ್ (37), ಶಿವಯ್ಯ (36) ಬಂಧಿತರು.

 ಶನಿವಾರ ಸಂಜೆ ಸುಮಾರು 6.30 ಗಂಟೆಗೆ ನಡೆದ ಈ ದಾಳಿಯಲ್ಲಿ ನಗದು ಹಾಗೂ ಹಲವು ವಸ್ತುಗಳನ್ನು ಮಣಿಪಾಲ ಪೊಲೀಸ್‌ ರು ವಶಪಡಿಸಿಕೊಂಡಿದ್ದಾರೆ. 

ಜೂಜಾಟಕ್ಕೆ ಬಳಸಲಾಗಿದ್ದ 1,02,060/- ರೂಪಾಯಿ ನಗದು, 7 ಮೊಬೈಲ್ ಫೋನ್‌ಗಳು, 2 ಬೈಕ್ ಮತ್ತು 1 ಕಾರು ಅನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles