Thursday, March 5, 2026

spot_img

ಕೊಡವೂರಿನಲ್ಲಿ ಅಂದರ್–ಬಾಹರ್ ಜುಗಾರಿ ಧಾಳಿ : ಎಂಟು ಮಂದಿ ಪೊಲೀಸರ ಬಲೆಗೆ

ಉಡುಪಿ : ಕೊಡವೂರು ಗ್ರಾಮದ ಮಲ್ಪೆ ಹನುಮಾನ್ ನಗರ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲೇ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್ ರು ಗುರುವಾರ ಸಂಜೆ ಧಾಳಿ ನಡೆಸಿದ್ದಾರೆ. ಈ ವೇಳೆ ಅಂದರ್–ಬಾಹರ್ ಜುಗಾರಿ ಆಟದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ.

 ಗುರುವಾರ ಸಂಜೆ ಸಂಜೆ 5 ಅಂದರ್–ಬಾಹರ್ ಇಸ್ಪೀಟಿನ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ, ಮಲ್ಪೆ ಪೊಲೀಸ್‌ ರು ಸ್ಥಳಕ್ಕೆ ಧಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ ಉಮೇಶ್, ಸಿದ್ರಾಮೇಶ, ಹನುಮೇಶ, ಮಲ್ಲಿಕಾರ್ಜುನ ಹಡಪದ, ಶಿವಪ್ಪ ಸರದಾರ, ವಿರೂಪಾಕ್ಷ, ಬಸವರಾಜ ಹಾಗೂ ಜಗದೀಶ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಧಾಳಿಯಲ್ಲಿ ಆಟಕ್ಕೆ ಬಳಸಲಾದ ವಸ್ತುಗಳು, ನಗದು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles