Tuesday, March 3, 2026

spot_img

ಶಿರ್ವದಲ್ಲಿ ಇಸ್ಪೀಟ್ ಜುಗಾರಿ: ಮೂವರು ಬಂಧನ

ಉಡುಪಿ : ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಇರ್ಮಿಂಜ ಚರ್ಚ್ ಸಮೀಪದ ಸಾರ್ವಜನಿಕ ರಸ್ತೆಯ ಬಳಿ ಇಸ್ಪೀಟ್ ಜುಗಾರಿ ಆಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ ಘಟನೆ ನಡೆದಿದೆ. ನಿಂಗಪ್ಪ ಗಡ್ಡದವರ (37), ನಿಂಗಪ್ಪ ಅಂಬಿಗೇರ (23) ಮತ್ತು ರಾಘವೇಂದ್ರ ಸಣ್ಣತಂಗೇರ (28) ಬಂಧಿತರು.

 ಪೊಲೀಸ್ ಉಪನಿರೀಕ್ಷಕ ಮಂಜುನಾಥ ಮರಬದ ಅವರು ಠಾಣಾ ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ರಾತ್ರಿ ಸುಮಾರು 11:30 ಗಂಟೆಗೆ, ಕಾಪು ತಾಲೂಕು ಶಿರ್ವ ಗ್ರಾಮದ ಇರ್ಮಿಂಜ ಚರ್ಚ್ ಬಳಿ ಬೀದಿ ದೀಪದ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದವರ ಗಮನಿಸಿ ಧಾಳಿ ನಡೆಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದು, ಇಸ್ಪೀಟ್ ಜುಗಾರಿ ಆಟಕ್ಕೆ ಬಳಸುವ ವಸ್ತುಗಳು, ನಗದು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles