ಉಡುಪಿ : ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಡಿಸೆಂಬರ್ 7ರಂದು ನಡೆಯಲಿರುವ ಉಡುಪಿ ಮ್ಯಾರಥಾನ್ ಹಾಗೂ ಸ್ಯಾರಿ ರನ್ ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಇಂದು ಉಡುಪಿ ಎಸ್ಪಿ ಕಚೇರಿಯಲ್ಲಿ ಅಧಿಕೃತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರನ್ನರ್ಸ್ ಕ್ಲಬ್‌ನ ಡಾ. ತಿಲಕ್ ಚಂದ್ರ ಪೈ, ದಿವ್ಯೇಶ್ ಶೆಟ್ಟಿ ಸೇರಿದಂತೆ ಆಯೋಜನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮ್ಯಾರಥಾನ್‌ಗಾಗಿ ನೋಂದಣಿ ಅಕ್ಟೋಬರ್ 18ರಿಂದ ನವೆಂಬರ್ 30ರವರೆಗೆ ತೆರೆಯಲಾಗಿದ್ದು, ಭಾಗವಹಿಸಲು ಆಸಕ್ತರು ಅಧಿಕೃತ ವೆಬ್‌ಸೈಟ್ www.udupimarathon.in ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.

ಈ ಬಾರಿ ಮ್ಯಾರಥಾನ್ ಉಡುಪಿ ನಗರದ ಕ್ರೀಡಾ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲಿದ್ದು, ಎಲ್ಲಾ ವಯೋಮಾನದ ಓಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ.
