ಉಡುಪಿ: ಮಲ್ಪೆ ಬೀಚ್ ಗೆ ಬಂದಿದ್ದ ಮಹಿಳೆಯೋರ್ವರು ಆತ್ಮಹತ್ಯೆಗೆ ಯತ್ನಿಸಿ, ಸ್ಥಳೀಯ ಗಸ್ತು ಸಿಬ್ಬಂದಿಗಳು ರಕ್ಷಿಸಿದ ಘಟನೆ ನಡೆದಿದೆ. ಮಣಿಪಾಲದ ನಿವಾಸಿಯಾದ ಮಹಿಳೆ ಮನೆಯ ಕೌಟುಂಬಿಕ ಸಮಸ್ಯೆಗಳಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮಹಿಳೆಯ ರಕ್ಷಣೆಯ ಬಳಿಕ ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮಲ್ಪೆಗೆ ಬಂದಿರುವುದಾಗಿ ತಿಳಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗೆ, ಮಹಿಳೆಯನ್ನು ಮಲ್ಪೆ ಪೊಲೀಸ್ ಠಾಣೆಗೆ ಕರೆದೊಯ್ದು ವಶಕ್ಕೆ ಪಡೆದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ಟೂರಿಸ್ಟ್ ಪೊಲೀಸ್ ಸಿಬ್ಬಂದಿ ಸುಬ್ರಮಣ್ಯ ಮತ್ತು ಸುರೇಶ್ ಅಂಚನ್ ಪಡುಬಿದ್ರಿ, ಗೃಹರಕ್ಷಕ ದಳದ ವಿಕಾಸ್ ಮತ್ತು ಜೀವ ರಕ್ಷಕ ದಳದ ಅಶೋಕ್ ಮತ್ತು ದೂದ ಭಾಗವಹಿಸಿದ್ದರು.