ಉಡುಪಿ : ಉಡುಪಿ ಶ್ರೀ ಶೀರೂರು ಮಠ ಇದರ ಪರ್ಯಾಯ ಪೂರ್ವಭಾವಿ ಸಭೆ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ನಡೆಯಿತು.

ಶ್ರೀ ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಕ್ರಷ್ಣನ ಪರ್ಯಾಯ ನಮ್ಮ ನಿಮ್ಮೆಲ್ಲರ ಪರ್ಯಾಯೋತ್ಸವ, ಈ ಉತ್ಸವದ ಯಶಸ್ಸಿಗೆ ಸಂಪೂರ್ಣ ಕಾರಣಕರ್ತರು ನೀವಾಗಬೇಕೆಂದು ಮತ್ತು ಮುಂದಿನ ಎರಡು ವರ್ಷಗಳ ಕಾಲ ಮಠದ ಎಲ್ಲ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕರೆಯಿತ್ತರು.

ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿಗಳಾದ ಮೋಹನ್ ಭಟ್, ಸಂದೀಪ್ ಮಂಜ, ಶ್ರೀಕಾಂತ ನಾಯಕ್, ಮಠದವರಾದ ಆಶ್ವಥ್ ಭಾರದ್ವಾಜ್ ಶ್ರೀ ಮಠದ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಸ್ಥಳೀಯ ಪ್ರಮುಖರಾದ ಭಾಸ್ಕರ ಜೋಯಿಸ್, ನವೀನ್ ಅಡ್ಯಂತಾಯ, ಹರ್ಷ ಶೆಟ್ಟಿ ಮಂಜುನಾಥ್ ಭಟ್ ಶಿವಪುರ ಮತ್ತಿತರರು ಉಪಸ್ಥಿತರಿದ್ದರು. ಮುಂದಿನ ಸಂಪರ್ಕ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಪುಟ್ಟಣ್ಣ ಭಟ್ ಧನ್ಯವಾದ ಸಮರ್ಪಿಸಿದರು.
