ಉಡುಪಿ : ಸೈಬರ್ ವಂಚಕರು ಮಹಿಳೆಯೊರ್ವರನ್ನು ವಂಚಿಸಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ ಘಟನೆ ಕೋಟೇಶ್ವರದಲ್ಲಿ ನಡೆದಿದೆ. ಕೋಟೇಶ್ವರ ಗ್ರಾಮದ ಹೊಸ ಬಡಾಕೇರಿಯ ಅಭಿನಯ(40) ಸೈಬರ್ ವಂಚನೆಗೆ ಒಳಗಾದವರು.

ಡೆನಿಯಲ್ ಮೈಕಲ್ ಎಂಬ ಹೆಸರಿನ ವ್ಯಕ್ತಿ ಮೇ ತಿಂಗಳಲ್ಲಿ ಅಭಿನಯ ಎನ್ನುವವರು ಫೇಸ್‌ಬುಕ್‌ಗೆ ಸಂದೇಶ ಕಳುಹಿಸಿ, ಒಂದು ಮೊಬೈಲ್ ಹಾಗೂ ಬ್ಯಾಗ್ ಮತ್ತು 50000 ಡಾಲರ್ ನೀಡುವುದಾಗಿ ತಿಳಿಸಿ, ಇಂಡಿಯನ್ ಕರೆನ್ಸಿಯಲ್ಲಿ 56 ಲಕ್ಷ ರೂ. ಆಗುವುದಾಗಿ ಹೇಳಿ ಇದನ್ನು ಗಿಫ್ಟ್ ರೂಪದಲ್ಲಿ ಮನೆಗೆ ಕಳುಹಿಸುವುದಾಗಿ ತಿಳಿಸಿದ್ದಾನೆ. ಅಲ್ಲದೇ ಈ ಗಿಫ್ಟ್ ಮನೆಗೆ ಬರಬೇಕಾದರೆ ತನ್ನ ಖಾತೆಗೆ ಹಣ ಹಾಕುವಂತೆ ಆತ ತಿಳಿಸಿದ್ದ. ಆತ ನೀಡಿದ ಗಿಫ್ಟ್ ಆಸೆಗೆ ಮರಳಾದ ಅಭಿನಯ, ಬೇರೆ ಬೇರೆ ಹಂತ ಗಳಲ್ಲಿ ಒಟ್ಟು 11,92,500ರೂ. ಹಣವನ್ನು ಹಾಕಿದ್ದಾರೆ. ಆದರೆ ಸೈಬರು ವಂಚಕರು ಗಿಫ್ಟ್ ನೀಡದೆ, ಹಣವನ್ನೂ ವಾಪಾಸ್ಸು ಮಾಡದೆ ಮೋಸ ಮಾಡಿದ್ದಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
