ಉಡುಪಿ : ಕೇಂದ್ರ ಸರ್ಕಾರದ ಅನುದಾನದಿಂದ ಉಡುಪಿ ನಗರಸಭೆಯ ಯುಜಿಡಿ ಕಾರ್ಮಿಕರಿಗೆ ಮಂಜೂರಾದ ಸುರಕ್ಷಾ ಪರಿಕರಗಳ ಕಿಟ್ ಗಳನ್ನು ಶುಕ್ರವಾರ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿಯವರು ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ನಗರಸಭೆಯ ಒಳ ಚರಂಡಿಯ ಕಾರ್ಮಿಕರಿಗೆ ವಿತರಿಸಿದರು.

ಈ ಸಂದರ್ಭ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಮಣಿಪಾಲ್, ವಿಜಯ ಕೊಡವೂರು, ಸದಸ್ಯರಾದ ರಶ್ಮಿ ಸಿ ಭಟ್, ಪರಿಸರ ಅಭಿಯಂತರ ರವಿಪ್ರಕಾಶ್. ಆರೋಗ್ಯ ನಿರೀಕ್ಷಕರಾದ ಪ್ರಕಾಶ್ ಪ್ರಭು, ಹರೀಶ್ ಬಿಲ್ಲವ, ಸತೀಶ್ ಹಾಜರಿದ್ದರು.
