ಉಡುಪಿ : ಉಡುಪಿ ಮೂಡನಿಡಂಬೂರು ಗ್ರಾಮದಲ್ಲಿ ಸಾರ್ವಜನಿಕವಾಗಿ ಮಾದಕವಸ್ತು ಎಂ.ಡಿ.ಎಂ.ಎ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಡುಪಿ ಪೊಲೀಸ್ ರು ಬಂಧಿಸಿದ್ದಾರೆ. ಇಕ್ಬಾಲ್ (33) ಬಂಧಿತ ಆರೋಪಿ, ಈತನಿಂದ 43,800 ರೂಪಾಯಿ ಮೌಲ್ಯದ ಎಂ.ಡಿ.ಎಂ.ಎ ವಶಕ್ಕೆ ಪಡೆಯಲಾಗಿದೆ.

ಮೂಡನಿಡಂಬೂರು ಗ್ರಾಮದ ಗರಡಿ ರಸ್ತೆಯಲ್ಲಿ 1ನೇ ಅಡ್ಡ ರಸ್ತೆಯಲ್ಲಿರುವ ಜಾನ್ ಹೇವೆನ್ ಕನ್‌ಸ್ಟ್ರಕ್ಷನ್ ಸಮೀಪ ಸ್ಕೂಟಿಯಲ್ಲಿ ಆರೋಪಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಆಧರಿಸಿ, ಧಾಳಿ ಮಾಡಿದ ಉಡುಪಿ ಪೊಲೀಸ್ ಆರೋಪಿಯನ್ನು ಬಂಧಿಸಿದ್ದಾರೆ.

ಆತನ ಸ್ಕೂಟಿ ಪರೀಶಿಲನೆ ನಡೆಸಿದಾಗ, 205 ಗ್ರಾಂ ತೂಕದ ಗಾಂಜಾ, 0.49 ಗ್ರಾಂ ತೂಕದ ಎಂ.ಡಿ.ಎಂ.ಎ 2 ಪ್ಲಾಸ್ಟಿಕ್ ಕವರ್ ಗಳು, ಸಮೇತ 0.33 ಗ್ರಾಂ ತೂಕದ ಎಂ.ಡಿ.ಎಂ.ಎ ಪ್ಲಾಸ್ಟಿಕ್ ಕವರ್ ಸೇರಿ ಒಟ್ಟು 43,800 ರೂಪಾಯಿ ಮೌಲ್ಯದ ಎಂ.ಡಿ.ಎಂ.ಎ , ತೂಕದ ಯಂತ್ರ, ಮತ್ತಿತರರು ವಸ್ತುಗಳು ಪತ್ತೆಯಾಗಿದೆ.

ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


