ಕುಂದಾಪುರ : ಲೈಂಗಿಕ ಸಂಪರ್ಕದ ಆಸೆ ಹುಟ್ಟಿಸಿ ಹನಿ ಟ್ರ್ಯಾಪ್ ಮಾಡಿ ಮನೆಯಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿ ವ್ಯಕ್ತಿಯೋರ್ವರನ್ನು ಕೂಡಿ ಹಾಕಿ ಬಲವಂತವಾಗಿ ೮೦ ಸಾವಿರಕ್ಕೂ ಅಧಿಕ ಹಣ ಲೂಟಿ ಮಾಡಿದ ಘಟನೆ ಕುಂದಾಪುರದಲ್ಲಿ ನಡೆದಿದೆ. ಸವದ್/ ಅಚ್ಚು(28), ಸೈಪುಲ್ಲಾ (38), ಮೊಹಮ್ಮದ್ ನಾಸೀರ್ ಶರೀಫ್ (36), ಅಬ್ದುಲ್ ಸತ್ತಾರ್ (23), ಅಬ್ದುಲ್ ಅಜೀಜ್ (26) ಮತ್ತು ಆಸ್ಮಾ (43) ಬಂಧಿತ ಆರೋಪಿಗಳು.

ಸಂದೀಪ ಕುಮಾರ್ ಎನ್ನುವವರು 3 ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಅಬ್ದುಲ್ ಸವಾದ್ ನ ಜೊತೆ ಸ್ನೇಹವಾಗಿತ್ತು. ಮೊಬೈಲ್ ಮೂಲಕ ಮಾತುಕತೆ ಮುಂದುವರಿದು, ಸವಾದ್ ಸ್ನೇಹಿತರ ಪರಿಚಯವು ಆಗಿತ್ತು. ಈ ನಡುವೆ ಸಂದೀಪ ಕುಮಾರ್ ಗೆ ಆಸ್ಮಾ ಇವರನ್ನು ಸವಾದ್ ಪರಿಚಯ ಮಾಡಿಕೊಟ್ಟಿದ್ದು, ಆಸ್ಮಾ ಮೊಬೈಲ್ ನಂಬ್ರ ಕೊಟ್ಟಿದ್ದ. ಆಕೆಯ ಜೊತೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ಸಂದೀಪ್ ಕುಮಾರ್, ಆರೋಪಿ ಆಸ್ಮಾ ಗೆ ಕರೆ ಮಾಡಿದ್ದಾರೆ. ಕರೆಯಲ್ಲಿ ಮಾತನಾಡುವ ವೇಳೆ ಕುಂದಾಪುರಕ್ಕೆ ಬರುವಂತೆ ಆಸ್ಮಾ ತಿಳಿಸಿದ್ದಾಳೆ. ಆಕೆಯ ಕರೆಯ ಮೇರೆಗೆ ಇದೇ ಆಗಸ್ಟ್ ೨ರಂದು ಸಂಜೆ ಸರಿಸುಮಾರು 6:30ಕ್ಕೆ ಕುಂದಾಪುರದ ಮಲ್ನಾಡ್ ಪೆಟ್ರೋಲ್ ಬಂಕ್ ಬಳಿ ಇರುವ ಆರ್ ಆರ್ ಪ್ಲಾಝಾ ಬಳಿ ಆಟೋ ರಿಕ್ಷಾದಲ್ಲಿ ಸಂದೀಪ್ ಕುಮಾರ್ ಬಂದಿದ್ದಾರೆ. ಬಳಿಕ ಆಸ್ಮಾ, ಸಂದೀಪ್ ಕುಮಾರ್ ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಬಳಿಕ ಉಳಿದ ಐವರು ಆರೋಪಿಗಳನ್ನು ಬರ ಕೇಳಿದ ಆಸ್ಮಾ, ಉಳಿದವರ ಜೊತೆ ಸೇರಿ 3 ಲಕ್ಷ ರೂಪಾಯಿ ಕೊಟ್ಟು ಹೋಗುವಂತೆ ಮೊಹಮ್ಮದ್ ನಾಸೀರ್ ಶರೀಫ್ ಈತನು ಚಾಕು ತೋರಿಸಿ ಹೆದರಿಸಿ, ಉಳಿದವರ ಜೊತೆ ಕೈಕಾಲು ಕಟ್ಟಿ, ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ, ಸಂದೀಪ್ ಜೇಬಿನಲ್ಲಿ 6200 ರೂಪಾಯಿ ನಗದು ಕಸಿದುಕೊಂಡಿದ್ದಾರೆ.

ಇಷ್ಟಕ್ಕೆ ಬಿಡದೆ ಸೈಪುಲ್ಲಾನ ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಮೂಲಕ ಒಟ್ಟು 35000 ರೂಪಾಯಿಯನ್ನು ಬಲವಂತವಾಗಿ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಪುನಃ ಬಲವಂತವಾಗಿ ಎಟಿಎಂ ಕಾರ್ಡ್ ಕಸಿದುಕೊಂಡು 40000 ರೂಪಾಯಿ ಡ್ರಾ ಮಾಡಿಕೊಂಡು, ರಾತ್ರಿ 11:30 ರ ಸುಮಾರಿಗೆ ಆರೋಪಿಗಳು ಸಂದೀಪ್ ಕುಮಾರ್ ಗೆ ಜೀವ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದಾರೆ. ಈ ಕುರಿತು ಸಂದೀಪ್ ಕುಮಾರ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಈ ಕುರಿತು ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸ್ ರು ತಂಡ ರಚಿಸಿ, ಆರೋಪಿಗಳನ್ನು ಕೋಟೇಶ್ವರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸುಲಿಗೆ ಮಾಡಿರುವುದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳಾದ ಆಸ್ಮಾ ಮತ್ತು ಮೊಹಮ್ಮದ್ ನಾಸೀರ್ ಶರೀಫ್ ಈ ಹಿಂದೆ ಕೂಡ ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಬ್ರೀಝಾ ಕಾರು ಮತ್ತು ಕ್ರೇಟಾ ಕಾರು ವಶಕ್ಕೆ ಪಡೆಯಲಾಗಿದೆ.


