ಉಡುಪಿ : ಅಂಬಲಪಾಡಿ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ ೬೬ ಇದರ ಸರ್ವೀಸ್ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆಗ ಸಂಬಂಧಪಟ್ಟಂತೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರು ಹೆದ್ದಾರಿ ಪ್ರಾಧಿಕಾರ ಮತ್ತು ಫ್ಲೈಓವರ್ ನಿರ್ಮಾಣ ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಪ್ರದೀಪ ಕುಮಾರ್ (33) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಬೈಕ್ ಸವಾರ. ಆಗಸ್ಟ್ ೧ರ ಸಂಜೆ ಕರಾವಳಿ ಬೈಪಾಸ್‌ನಿಂದ ಕಿನ್ನಿಮುಲ್ಕಿ ಕಡೆಗೆ ಲಾರಿ ಚಾಲಕ ಲವ್ ಪಾಟೀಲ್ ಎಂಬಾತ ವೇಗವಾಗಿ 16 ಚಕ್ರದ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ, ಅದೇ ದಿಕ್ಕಿನಲ್ಲಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರದೀಪ್ ಕುಮಾರ್, ರಸ್ತೆ ಹೊಂಡಕ್ಕೆ ಬಿದ್ದ ಪರಿಣಾಮ ಲಾರಿ ಚಕ್ರದ ಅಡಿ ಸಿಲುಕಿದ್ದಾನೆ. ಅಪಫಾತ ಹಿನ್ನಲೆ ಪ್ರದೀಪ್ ಕುಮಾರ್ ಮೋಟಾರ್‌ಸೈಕಲ್‌ನಿಂದ ರಸ್ತೆಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಲಾರಿಗೆ ಸಿಲುಕಿದ ಬೈಕ್ ಸವಾರನ ದೇಹ ಸುಮಾರು ದೂರು ಉಜ್ಜಿಕೊಂಡು ಹೋಗಿದೆ, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕುರಿತು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಂಬಲಪಾಡಿ ಜಂಕ್ಷನ್ ಬಳಿ ನಡೆಯುತ್ತಿರುವ ಫ್ಲೈ-ಓವರ್ ಕಾಮಗಾರಿಯಿಂದಾಗಿ ಸರ್ವಿಸ್ ರಸ್ತೆಯಲ್ಲಿ ಹೊಂಡಗಳು ಉಂಟಾಗಿದ್ದು, ಇವುಗಳನ್ನು ದುರಸ್ತಿ ಮಾಡದಿರುವುದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಕಾಮಗಾರಿ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾರ್ಲ ಕನ್‌ಸ್ಟ್ರಕ್ಷನ್ ಕಂಟ್ರಾಕ್ಟರ್‌ರವರ ನಿರ್ಲಕ್ಷ್ಯದಿಂದ ರಸ್ತೆಯ ಸ್ಥಿತಿ ಕಳಪೆಯಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೇ ಹಿನ್ನಲೆಯಲ್ಲಿ ಅಪಘಾತ ನಡೆದಿದೆ ಎನ್ನಲಾಗಿದ್ದು, ಘಟನೆಗೆ ನಿರ್ಲಕ್ಷ್ಯತನ ತೋರಿರುವ ರಾಷ್ಟ್ರೀಯ ಹೆದ್ದಾರಿ-66 ಪ್ರಾಧಿಕಾರದ ಅಧಿಕಾರಿಗಳು, ಫ್ಲೈ ಓವರ್ ನಿರ್ಮಾಣ ಕಾಮಗಾರಿ ಮಾಡುತ್ತಿರುವ ಕಾರ್ಲ ಕನ್‌ಸ್ಟ್ರಕ್ಷನ್ ಕಂಟ್ರಾಕ್ಟರ್, ಹಾಗೂ ಲಾರಿ ಚಾಲಕ ಲವ್ ಪಾಟೀಲ್ ಮೇಲೆ ಪ್ರಕರಣ ದಾಖಲಿಸಲಾಗಿದೆ.