Tuesday, August 26, 2025

spot_img

ಗೆಳತಿಯ ಜೊತೆಗೆ ಅತೀ ಸಲುಗೆ, ಆತ್ಮೀಯತೆ: ಇರಿದು ಕೊಂದ ಗೆಳೆಯ

ಉಡುಪಿ : ಕಾರ್ಕಳದ ಕುಂಟಲ್ಪಾಡಿಯ ರಸ್ತೆಯ ಪಕ್ಕದಲ್ಲಿ ಸೋಮವಾರ ತಡರಾತ್ರಿ ಬರ್ಬರವಾಗಿ ವ್ಯಕ್ತಿ ಯೋರ್ವನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಂಗಳೂರು ಮೂಲದ ನವೀನ್ ಪೂಜಾರಿ (50) ಕೊಲೆಯಾದ ವ್ಯಕ್ತಿ. ಕಾರ್ಕಳದ ಎಸ್ ಜೆ ಆರ್ಕೇಡ್‌ ನಲ್ಲಿ ಬಡ್ಡಿ ವ್ಯವಹಾರ ನಡೆಸಿಕೊಂಡಿದ್ದ ಈತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆರೋಪಿ ಪರೀಕ್ಷಿತ್ ಸಂಜೀವ್ ಗೌಡ (೪೪) ನನ್ನು ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ.

ಕಳೆದ ಮೂರು ದಿನಗಳಿಂದ ಇಬ್ಬರ ನಡುವೆ ಜಗಳ ಮುಂದುವರಿದಿತ್ತು ಎನ್ನಲಾಗಿದೆ. ನಿನ್ನೆ ತಡರಾತ್ರಿ ಕೊಲೆಯಾದ ನವೀನ್‌ ಮತ್ತು ಆರೋಪಿ ಕಾರ್ಕಳದ ಬಾರ್‌ ಒಂದರಲ್ಲಿ ಒಟ್ಟಿಗೆ ಕುಳಿತು ಕುಡಿದಿದ್ದಾರೆ. ಈ ವೇಳೆಯೇ ಜಗಳವಾಡುತ್ತಿದ್ದನ್ನು ಕೆಲವರು ಗಮನಿಸಿದ್ದರು ಎನ್ನಲಾಗಿದೆ. ಬಾರ್‌ ಬಂದ್‌ ಆದ ಬಳಿಕ ಅಲ್ಲಿಂದಲೇ ಜಗಳವಾಡುತ್ತಾ ಬಂದಿದ್ದು ಇಬ್ಬರು, ಕುಂಟಲ್ಪಾಡಿ ಬಸ್‌ ನಿಲ್ದಾಣದ ಬಳಿಕ ಬರುವಾಗ ಜಗಳ ತಾರಕ್ಕೇರಿದೆ, ವಾಗ್ವಾದ ಹಲ್ಲೆಗೆ ತಿರುಗಿ ಆರೋಪಿ ಚಾಕುವಿನಿಂದ ನವೀನ್‌ ಗೆ ಇರಿದಿದ್ದಾನೆ. ಆರೋಪಿ ಜೊತೆಗೆ ಇದ್ದ ಸ್ಥಳಿಯ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿ ನವೀನ್‌ ನನ್ನು ಆಸ್ಪತ್ರೆಗೆ ಸೇರಿಸುವ ಯತ್ನದಲ್ಲಿದ್ದಾಗ ಆರೋಪಿ ಪರಾರಿಯಾಗಿದ್ದ.

ಘಟನಾಸ್ಥಳಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್‌, ಕಾರ್ಕಳ ಉಪವಿಭಾಗದ ಎಎಸ್ಪಿ ಡಾ. ಹರ್ಷಪ್ರಿಯಂವದ, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ನಗರ ಠಾಣೆ ಎಸ್ಐ ಮುರಳೀಧರ್‌ ನಾಯ್ಕ್,‌ ಗ್ರಾಮಾಂತರ ಠಾಣೆ ಎಸ್ಐ ಪ್ರಸನ್ನ ಎಂ.ಎಸ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯ ತನಿಖೆ ಹಿನ್ನಲೆ ಆರೋಪಿ ಬೆನ್ನು ಹತ್ತಿದ್ದ ಪೊಲೀಸ್‌ ರು ಪರೀಕ್ಷಿತ್‌ ಸಂಜೀವ್ ಗೌಡನನ್ನು ಬಂಧಿಸಿದ್ದಾರೆ.

ಕೊಲೆಗೆ ಕಾರಣ ಹುಡುಗಿ ವಿಚಾರ ಎನ್ನುವುದು ತನಿಖೆಯ ವೇಳೆ ಹೊರಬಿದ್ದಿದೆ. ಕೊಲೆಯಾದ ನವೀನ್‌ ಪೂಜಾರಿ ಮತ್ತು ಪರೀಕ್ಷಿತ್‌ ಸಂಜೀವ್ ಗೌಡ ಪರಿಚಿತರು, ಹೀಗಾಗಿ ಆಗಾಗ ಭೇಟಿಯಾಗುತ್ತಿದ್ದರು. ಇಬ್ಬರೂ ವಿವಾಹಿತರಾಗಿದ್ದು ಹೆಂಡತಿಯಿಂದ ಮುನಿಸಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಆರೋಪಿ ಪರೀಕ್ಷಿತ್ ಸಂಜೀವ್ ಗೌಡನ ಗೆಳತಿಯೊಂದಿಗೆ ಕೊಲೆಯಾದ ನವೀನ್ ಪೂಜಾರಿ ಪರಿಚಯ ಬೆಳೆಸಿಕೊಂಡಿದ್ದ. ಅಲ್ಲದೇ ಆರೋಪಿಯ ಗೆಳೆತಿಯ ಜೊತೆಗೆ ಹೆಚ್ಚಿನ ಅತ್ಮೀಯತೆಯಿಂದ ಇರುವುದನ್ನು ಆರೋಪಿ ಗಮನಿಸಿದ್ದಾನೆ. ಇದೇ ಹಿನ್ನಲೆಯಲ್ಲಿ ಕೋಪಗೊಂಡು ಇರಿದು ಕೊಲೆ ಮಾಡಿದ್ದಾನೆ. ಸದ್ಯ ಕೊಲೆಯ ಕುರಿತು ಉಡುಪಿ ಎಸ್ಪಿ ಹರಿರಾಂ ಶಂಕರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೊಲೆಯ ಸಂಬಂಧ ಸಾಕ್ಷ್ಯಗಳನ್ನು ಕಲೆಹಾಕಿ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ.ಸದ್ಯ ಆರೋಪಿಯನ್ನು ಬಂಧಿಸಿದ್ದೇವೆ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles