ಉಡುಪಿ : 79ನೇ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅಶ್ವತ್ಥ ಎಲೆಯ ಕಲೆಯ ಮೂಲಕ ಗೌರವಾರ್ಪಣೆ ಸಲ್ಲಿಸಿದ್ದಾರೆ.

ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ, ಸತ್ಯಾಗ್ರಹ, ಮತ್ತು ಮೊದಲ ಸ್ವಾತಂತ್ರ್ಯ ದಿನದ ಸಂಭ್ರಮ ಚಿತ್ರಿಸಿದ್ದಾರೆ. ದೇಶ ಕಾಯುವ ಸೈನಿಕರಿಗೂ ಗೌರವ ಸಲ್ಲಿಸಿದ್ದಾರೆ.

ಬಹಳ ನಾಜೂಕಿನ ಕಲೆಯಾಗಿರುವ ಲೀಫ್ ಆರ್ಟ್ ನಲ್ಲಿ ಹೋರಾಟಗಾರರು ಬ್ರಿಟಿಷರು ಸೈನಿಕರು, ಇಂಗ್ಲೆಂಡ್ ನ ಧ್ವಜ ಭಾರತದ ತ್ರಿವರ್ಣ ಧ್ವಜವನ್ನು ಸುಂದರವಾಗಿ ಮೂಡಿಸಿದ್ದಾರೆ.