ಉಡುಪಿ : ತೋಟಗಾರಿಕೆ ಇಲಾಖೆ, ಉಡುಪಿ ಇವರ ವತಿಯಿಂದ ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್. ಮರಿಗೌಡರವರ 109 ನೇ ಜನ್ಮ ದಿನಾಚರಣೆಯನ್ನು, ತೋಟಗಾರಿಕೆ ದಿನವನ್ನಾಗಿ ಉಡುಪಿಯ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೆಚ್.ಕೆ. ಬೀಳಗಿ, ಹೇಮಂತ್ ಕುಮಾರ್, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಉಡುಪಿ ತಾಲೂಕಿನ ರೈತರು ಹಾಗೂ ಮತ್ತಿತರರು ಭಾಗವಹಿಸಿದ್ದರು.
