ಕೋಟ : ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಇಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷನಲ್ಲಿ ಅಭಿಮಾನ, ಇಂದಿಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಇದ್ದು, ಇಂದಿಗೂ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಇಂದು ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನ ಗುರುತಿಸಿ, ಅಭಿನಂದಿಸಿ, ಗೌರವವಿಸುವ ಸರಣಿ ಕಾರ್ಯಕ್ರಮ ನಡೆಯಿತು.

ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪಿ . ಶ್ರೀನಿವಾಸ್ ಅಮೀನ್ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಿಷ್ಠಾವಂತ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಬಸವಪೂಜಾರಿ ಮತ್ತು ಶ್ರೀಮತಿ ಕುಸುಮ ಬಸವ ಪೂಜಾರಿ ದಂಪತಿಗಳು ( ಮಾಜಿ ಪಟ್ಟಣ ಪಂಚಾಯತ್ ಸದಸ್ಯರು), ರಘು ಭಂಡಾರಿ ಕಾರ್ಕಡ ಕುಂಜಿಗುಡಿ ಹಾಗೂ ಜಿ. ಮೊಹಮ್ಮದ್ ಖಾಶಿಮ್ ಸಾಹೇಬ್ ಇವರನ್ನು ಪಕ್ಷದ ಎಲ್ಲ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಅವರ ಮನೆಗೆ ತೆರಳಿ ಅಭಿನಂದನಾ ಆಲೇಖ ಪತ್ರವನ್ನ ನೀಡಿ ಸನ್ಮಾನಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಎ ಕುಂದರ್ ರವರು ಅಂದಿನ ಕಾಲದಿಂದಲೂ ಇಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ದುಡಿದು ಇವರನ್ನ ಶ್ಲಾಘನೆ ಮಾಡುತ್ತಾ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಮಾತನಾಡಿ, ಇದೊಂದು ಯಾವತ್ತು ಮರೆಯಲಾಗದ ಅದ್ಭುತ ಕಾರ್ಯಕ್ರಮ, ಪಕ್ಷಕ್ಕಾಗಿ ದುಡಿದು ಇಂದಿಗೂ ಕಾಂಗ್ರೆಸ್ ಪಕ್ಷನಲ್ಲಿ ಸಕ್ರಿಯವಾಗಿ ಇರುವರನ್ನ ಗುರುತಿಸುತ್ತಿರುವುದು ಇದೊಂದು ಕಾಂಗ್ರೆಸ್ ಪಕ್ಷದ ಐತಿಹಾಸಿಕ ಕಾರ್ಯಕ್ರಮ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕೋಟ ಸಹಕಾರಿ ಬ್ಯಾಂಕ್ ನ ಮಾಜಿ ನಿರ್ದೇಶಕರಾದ ಅಚ್ಚುತ್ ಪೂಜಾರಿ ಕಾರ್ಕಡ, ಹಲವು ಮಕ್ಕಳು ತಾಯಿ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ್ ಕೆ ನೆಲ್ಲಿಬೆಟ್ಟು, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಕಾರ್ಯದರ್ಶಿ ಶೇಖರ್ ಪಿ ಮರಕಾಲ ಕಾರ್ಕಡ, ವಕೀಲರಾದ ಮೊಹಮ್ಮದ್ ಸುಹಾನ್ ಗುಂಡ್ಮಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ, ರಮೇಶ್ ಮೆಂಡನ್ ಬಡಹೋಳಿ, ಗಣೇಶ್ ಮೆಂಡನ್ ಬೆಟ್ಲಕ್ಕಿ, ಮಂಜುನಾಥ್ ಪೂಜಾರಿ ಗುಂಡ್ಮಿ, ರಮೇಶ್ ಪೂಜಾರಿ ಮೂಡಹೋಳಿ, ಶಶಿಧರ್ ಪೂಜಾರಿ ಮೂಡಹೋಳಿ ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಕೋಟ ವ್ಯವಸಾಯಕ ಬ್ಯಾಂಕ್ (ನಿ) ನ ನಿರ್ದೇಶಕರಾದ ರವೀಂದ್ರ ಕಾಮತ್ ಗುಂಡ್ಮಿ ಸ್ವಾಗತಿಸಿ ಧನ್ಯವಾದಿಸಿದರು.


