ಹೆಬ್ರಿ: ಎಸ್. ಎನ್.ಸಿ. ಗುತ್ತಿಗೆ ಸಂಸ್ಥೆಯ ಕ್ರೇನ್ ಹರಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಮೃತಪಟ್ಟ ಘಟನೆ ಹೆಬ್ರಿಯಲ್ಲಿ ನಡೆದಿದೆ. ಚಣಿಲ(75) ಕ್ರೇನ್ ಹರಿದು ಮೃತಪಟ್ಟ ದುರ್ದೈವಿ ಪಾದಾಚಾರಿ. ಹೆಬ್ರಿ ಮುದ್ರಾಡಿ ಕೆಳಪೇಟೆಯಲ್ಲಿ ಈ ಘಟನೆ ನಡೆದಿದೆ.

ಮುದ್ರಾಡಿ ಪಂಚಾಯತ್‌ಗೆ ಹೋಗುವುದಕ್ಕಾಗಿ ಚಣಿಲ ಎನ್ನುವವರು ಮುದ್ರಾಡಿ ಜಂಕ್ಷನ್‌ನಿಂದ ಸ್ವಲ್ಪ ಮುಂದೆ ಕಾರ್ಕಳ ರಸ್ತೆಯ ಎಡ ಬದಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು ಸಂದರ್ಭ ಹೆಬ್ರಿ ಕಡೆಯಿಂದ ವೇಗವಾಗಿ ಬಂದ ಕ್ರೇನ್ ಅಪರೇಟರ್ ಅಜಾರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ್ದಾನೆ. ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಚಣಿಲ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಚಣಿಲರವರ ಸೊಂಟ ಹಾಗೂ ಹೊಟ್ಟೆಯ ಮೇಲೆ ಕ್ರೇನ್‌ನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ

ಅಪಘಾತ ನಡೆದ ನಂತರ ಚಾಲಕ ಕ್ರೇನ್ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ, ಸ್ಥಳೀಯರೆಲ್ಲ ಸೇರಿ ಅವನನ್ನು ತರಾಟೆಗೆ ತೆಗೆದುಕೊಂಡಾಗ ಬಳಿಕ ಸ್ವಲ್ಪ ದೂರದಲ್ಲಿ ಮುಂದೆ ಹೋಗಿ ಕ್ರೇನ್ ನಿಲ್ಲಿಸಿರುತ್ತಾನೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕ್ರೇನ್ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.


