Thursday, October 23, 2025

spot_img

ಅಸೂಯೆ ಒಂದು ಆಧ್ಯಾತ್ಮಿಕ ರೋಗ….

ಅಸೂಯೆ ಎನ್ನುವುದು ಸಾಧಾರಣ ಭಾವನೆ ಅಲ್ಲ – ಅದು ಒಂದು ಆಧ್ಯಾತ್ಮಿಕ ರೋಗ. ನಾವು ಯಾರಾದರೂ ಬೆಳೆಯುತ್ತಿದ್ದಾರೆ, ಅವರ ಜೀವನದಲ್ಲಿ ಸಮೃದ್ಧಿ ಬರುತ್ತಿದೆ, ಗೌರವ, ಧನ, ಕೀರ್ತಿ, ಪವಿತ್ರತೆಯ ಪ್ರಭೆ ಮೂಡುತ್ತಿದೆ ಅನ್ನೋ ಮಾಹಿತಿ ನಮಗೆ ಸಿಗುತ್ತೆ. ಆ ಕ್ಷಣ ಮನಸ್ಸು ಮೌನದಿಂದ ಕಣ್ಣಲ್ಲಿ ಆನಂದ ತುಂಬಿಕೊಳ್ಳಬಲ್ಲದು. ಆದರೆ ಕೆಲವೊಮ್ಮೆ ಅಜ್ಞಾನ, ಅಹಂಕಾರ ಮತ್ತು ‘ನಾನು ಮಾತ್ರ’ ಅನ್ನೋ ಭಾವನೆಯ ಮಿಶ್ರಣದಿಂದ ಅದು ಮರು ರೂಪ ಪಡೆದು “ಅಸೂಯೆ” ಎಂಬ ವಿಷವನ್ನಾಗಿ ಪರಿವರ್ತಿತವಾಗುತ್ತದೆ.
ಅಸೂಯೆ – ಆತ್ಮಶಕ್ತಿ ಕುಗ್ಗಿಸುವ ಶಕ್ತಿ ಒಬ್ಬರ ಬೆಳವಣಿಗೆಯಿಂದ ಅಸೂಯೆ ಹೊಟ್ಟೆ ಉರಿ ಪಡುವ ಮನಸ್ಸು ಅರ್ಥಮಾಡಿಕೊಳ್ಳಬೇಕು – ನಾವು ಆತ್ಮಧರ್ಮದಿಂದ ದೂರ ಹೋಗುತ್ತಿದ್ದೇವೆ. ಅಸೂಯೆ ಹುಟ್ಟುವುದು ನಮ್ಮ ಒಳಗಿನ ಆತ್ಮಸಾಕ್ಷಾತ್ಕಾರದ ಶಕ್ತಿಗೆ ತಡೆ ಹಾಕುವಂತೆ. ಅದು ಮನಸ್ಸನ್ನು ಮಾಲಿನ್ಯದಿಂದ ತುಂಬಿ, ನೈತಿಕ ಪವಿತ್ರತೆಯ ಹತ್ತಿರ ಹೋಗದಂತೆ ತಡೆಯುತ್ತದೆ. ಪವಿತ್ರ ಚಕ್ರಗಳು ನಿಕೃಷ್ಟ ಶಕ್ತಿಯಿಂದ ಆವರಿತವಾಗುತ್ತವೆ. ನಾಭಿಚಕ್ರ, ಹೃದಯಚಕ್ರ, ಆಜ್ಞಾಚಕ್ರ – ಇವುಗಳಲ್ಲಿ ಪ್ರತಿಕೂಲ ಚಲನೆ ಉಂಟಾಗುತ್ತದೆ. ಅಸೂಯೆ ಯಾಕೆ ಆಗುತ್ತದೆ?
ಇನ್ನೊಬ್ಬನು ನನ್ನಿಗಿಂತ ಮುಂದೆ ಹೋಗಿದ್ದಾನೆ ಎಂಬ ಭಾವನೆ ನನ್ನ ಪ್ರಯತ್ನಕ್ಕಿಂತ ಬೇರೆವರಿಗೆ ಹೆಚ್ಚು ದೊರೆತಿದೆ ಅನ್ನೋ ನೋವು ನಾವು ನಮ್ಮನ್ನು ಹೋಲಿಸಿ ತೆಗೆದುಕೊಳ್ಳುವ ದುರ್ಮಾನ ಇವೆಲ್ಲವನ್ನೂ ನೋಡಿದರೆ, ಅಸೂಯೆ ನಮ್ಮ “ಅಹಂಕಾರದ ಪೆಟ್ಟಿಗೆ”ಗೆ ಹೊರೆಹಾಕಿದ ಕಿಡಿ. ಆ ಕಿಡಿಯಿಂದ ನಮಗೆ ಬೆಂಕಿ ತಗಲುತ್ತದೆ – ಬೇರೊಬ್ಬರಿಗೆ ಅಲ್ಲ.

ಆಧ್ಯಾತ್ಮಿಕ ಪರಿಣಾಮಗಳು

  1. ಆತ್ಮದ ಬೆಳಕಿಗೆ ತಡೆ ಅಸೂಯೆ ನಮ್ಮಿಂದ ಪ್ರಕಾಶವನ್ನು ತೆಗೆಯುತ್ತದೆ. ಅದರಿಂದ ನಾವು ದಿವ್ಯ ಮಾರ್ಗಗಳಲ್ಲಿ ನೋಡಲಾರದು.
  2. ದೇವತಾ ಅನುಗ್ರಹ ಕಡಿಮೆ ಆಗುವುದು ಅಸೂಯೆಗೆ ಒಳಪಡುವ ಮನಸ್ಸಿಗೆ ದೇವರ ಕೃಪೆ ಎಷ್ಟು ಬರಬಹುದು? ದೇವರು ಇರುವ ಮನಸ್ಸು ಶುದ್ಧ, ಪ್ರೀತಿಯಿಂದ ತುಂಬಿರಬೇಕು.
  3. ಶತ್ರುತ್ವಶಕ್ತಿಗೆ ಆಹ್ವಾನ ನಮ್ಮ ಅಸೂಯೆಯಿಂದ ನಡುಗುತ್ತಿರುವ ಮನಸ್ಸು ಅನೇಕ ದೃಷ್ಟಿದೋಷ, ಕಟು ಶಕ್ತಿಗಳನ್ನು ಆಕರ್ಷಿಸುತ್ತದೆ.
  4. ಕುಟುಂಬ, ಸಂಬಂಧಗಳಿಗೆ ವಿಷ ಅಸೂಯೆ ವ್ಯಕ್ತಿತ್ವವನ್ನು ಹಾಳುಮಾಡುತ್ತದೆ. ಆತ್ಮೀಯ ಸಂಬಂಧಗಳು ಕುಂದುಹೋಗುತ್ತವೆ.

ಉದಾಹರಣೆ – ನಮ್ಮ ಪೌರಾಣಿಕ ಐತಿಹಾಸದಲ್ಲಿ:
ಇಂದ್ರನ ಅಸೂಯೆ – ವೃಷಪರ್ವನ ತಪಸ್ಸಿಗೆ ಆತ ಅಸಹ್ಯಪಟ್ಟನು. ಆದರೆ ಆ ಅಸೂಯೆಯಿಂದ ದೇವಲೋಕವೇ ಕಂಪಿಸಿತು. ಶಿಶುಪಾಲನ ಅಸೂಯೆ – ಶ್ರೀಕೃಷ್ಣನ ಮೇಲೆ ಇದ್ದ ಅಸೂಯೆ ಅವನ ಜೀವವನ್ನೇ ತೆಗೆದುಕೊಂಡಿತು.
ಆಧ್ಯಾತ್ಮದಲ್ಲಿ ಪರಿಹಾರಗಳು: ಅಭಿಮಾನ ಬಿಡುವುದು: ‘ನಾನು’ ಎನ್ನುವ ಅಹಂಕಾರವನ್ನೆಲ್ಲಾ ತ್ಯಜಿಸಿ “ಅವನು/ಅವಳು ಕೂಡ ದೇವರ ಮಗ/ಮಗಳು” ಎಂಬ ಭಾವನೆ ಬೆಳೆಸುವುದು.
ಪ್ರಾರ್ಥನೆ: “ಪರಮಾತ್ಮನೇ, ನನ್ನೊಳಗಿನ ಅಸೂಯೆ ಮಾಯವಾಗಲಿ, ನಾನು ಎಲ್ಲರಲ್ಲೂ ನಿನ್ನನ್ನು ಕಾಣಬಲ್ಲೆ” ಎಂದು ಪ್ರಾರ್ಥಿಸೋದು. ಅನುಗ್ರಹದ ದೃಷ್ಟಿಯಿಂದ ನೋಡುವುದು. ಬೇರೊಬ್ಬರಿಗೆ ದೊರಕಿರುವುದು ನನ್ನಲ್ಲಿಯೂ ಒಂದು ದಿನ ಬರುತ್ತದೆ ಎಂಬ ಶ್ರದ್ಧೆ. ಪ್ರತ್ಯಕ್ಷ ಪ್ರೇರಣೆಯಾಗಬೇಕು, ಅಸೂಯೆಯಾಗಿ ಅಲ್ಲ.
ಓಂ ಶಾಂತಿ ಮಂತ್ರ ಜಪ: ನಿತ್ಯ “ಓಂ ಶಾಂತಿ ಶಾಂತಿ ಶಾಂತಿ:” ಮಂತ್ರವನ್ನು 108 ಬಾರಿ ಉಚ್ಚರಿಸುವುದು ಮನಸ್ಸನ್ನು ಶಾಂತಗೊಳಿಸುತ್ತದೆ. ಆತ್ಮದಲ್ಲಿ ಅಸೂಯೆ ಇಲ್ಲದಾಗ ಏನಾಗುತ್ತದೆ? ದಿವ್ಯ ದೃಷ್ಟಿ ಬೆಳೆಯುತ್ತದೆ ಮನಸ್ಸು ಹಗುರವಾಗುತ್ತದೆ. ಇತರರ ಯಶಸ್ಸು ನಮಗೆ ಪ್ರೇರಣೆಯಾಗುತ್ತದೆ. ಭಗವಂತನ ಶಕ್ತಿ ನಮ್ಮೊಡನೆ ಕೆಲಸ ಮಾಡುತ್ತದೆ.
ಬೇರೊಬ್ಬನ ಬೆಳವಣಿಗೆ ನಮ್ಮ ಅಸಮಾಧಾನಕ್ಕೆ ಕಾರಣವಾಗಬಾರದು – ಅದು ನಮ್ಮ ಪ್ರೇರಣೆಯಾಗಿ ಪರಿಣಮಿಸಬೇಕು. ಪ್ರಪಂಚದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಚಕ್ರದಲ್ಲಿ ತಮ್ಮ ತಮ್ಮ ವೇಗದಲ್ಲಿ ಓಡುತ್ತಿದ್ದಾರೆ. ನಮ್ಮ ಓಟವನ್ನು ನಾವು ಶ್ರದ್ಧೆಯಿಂದ, ಶಾಂತಿಯಿಂದ, ಪ್ರೀತಿಯಿಂದ ಮುಂದುವರಿಸಬೇಕು. ಅಸೂಯೆಯ ಬದಲು “ಅನುಗ್ರಹ” ಭಾವನೆಯಿಂದ ನೋಡುವುದು – ಅದೇ ಆಧ್ಯಾತ್ಮಿಕ ಪ್ರಗತಿಯ ಮೊದಲ ಹೆಜ್ಜೆ. ಅವನ ಬೆಳವಣಿಗೆಯೂ ನಿನ್ನಲ್ಲಿಯೇ ಒಂದು ರೂಪದಲ್ಲಿ ನಡೆದುಕೊಳ್ಳುತ್ತಿದೆ ಎಂಬುದನ್ನು ಅರಿತು ಪ್ರೀತಿಯಿಂದ ಹಾರೈಸುವುದು .

  • Dharmasindhu Spiritual Life

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles